ನಿರ್ಣಾಯಕ ಹಾಗೂ ಅಂತಿಮ ಪಂದ್ಯ ಮಳೆಯಿಂದ ರದ್ದಗೊಂಡ ಹಿನ್ನೆಲೆಯಲ್ಲಿ 5 ಪಂದ್ಯಗಳ ಟಿ-20 ಸರಣಿಯನ್ನು ಭಾರತ ವಶಪಡಿಸಿಕೊಂಡಿದೆ.
ಬ್ರಿಸ್ಬೇನ್ ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ರವಾಸಿ ಭಾರತ ತಂಡವನ್ನು ಮೊದಲು ಬ್ಯಾಟ್ ಮಾಡುವಂತೆ ಆಹ್ವಾನಿಸಿದರು.
ಭಾರತ ತಂಡ 4.5 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 52 ರನ್ ಗಳಿಸಿದ್ದಾಗ ಸುರಿದ ಮಳೆ ಬಿಡದೇ ಕಾಡಿದ್ದರಿಂದ ಅಂಪೈರ್ ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.
ಸರಣಿಯ ಮೊದಲ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇದೀಗ ಕೊನೆಯ ಪಂದ್ಯವೂ ಮಳೆಗೆ ಬಲಿಯಾಯಿತು. ಭಾರತ ತಂಡ ನಡೆದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿದರೆ, ಒಂದರಲ್ಲಿ ಗೆಲುವು ಕಂಡ ಆಸ್ಟ್ರೇಲಿಯಾ ತವರಿನಲ್ಲಿ ಸರಣಿ ಸೋಲಿಗೆ ಗುರಿಯಾಯಿತು.


