ರಾಜ್ಯದಲ್ಲಿ ಸುಮಾರು 15 ಲಕ್ಷ ಮತಗಳ್ಳತನ ಆಗಿದೆ. ನನಗೆ ಇದರ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಮುಂಜಾನೆ 4 ಗಂಟೆಗೆ ವೋಟ್ ಡಿಲಿಟ್ ಮಾಡಿದ್ದಾರೆ ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮತಗಳ್ಳತನ ವಿರುದ್ಧ ನಾವು ಅಭಿಯಾನ ಮುಂದುವರಿಸುತ್ತೇನೆ. ಮುಂದಿನ ಚುನಾವಣೆಗೆ ಇದನ್ನು ಸರಿಪಡಿಸುತ್ತೇವೆ. ಬಿಜೆಪಿ ವೋಟ್ ಚೋರಿ ಮಾಡುತ್ತಿದೆ” ಎಂದರು.
“ಒಂದು ಲಕ್ಷಕ್ಕೂ ಹೆಚ್ಚು ವೋಟ್ ದುರ್ಬಳಕೆ ಆಗಿರುವುದು. ಒಂದೇ ಮನೆಯಲ್ಲಿ 80 ವೋಟ್ ಗಳು ಇರುವುದನ್ನು ಈಗಾಗಲೇ ರಾಹುಲ್ ಗಾಂಧಿ ತಿಳಿಸಿದ್ದಾರೆ. ಬೆಂಗಳೂರಿಗೆ ಬಂದು ಫ್ರೀಡಂ ಪಾರ್ಕ್ನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ಮಾಡಿದ್ದರು. ಕೆಲವು ವೋಟುಗಳನ್ನು ಶಿಫ್ಟ್ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಅವರು ಹೇಳಿದರು.
ಆಳಂದ ಕ್ಷೇತ್ರದಲ್ಲಿ ನಡೆದ ಮತಗಳ್ಳತನದ ಬಗ್ಗೆ ಗೊತ್ತಾಗಿದೆ. ಮತದಾನದ ದಿನದಂದು ಬೆಳಗ್ಗೆ ನಾಲ್ಕು ಗಂಟೆಗೆ ವೋಟರ್ ಲಿಸ್ಟ್ನಿಂದ ವೋಟ್ ತೆಗೆದು ಹಾಕಿದ್ದಾರೆ. 6000 ವೋಟು ಡಿಲೀಟ್ ಆಗಿತ್ತು. ಚಿಲುಮೆಯನ್ನು ಯಾವ ರೀತಿ ಬಳಸಿದ್ದರು ಎಂಬುದು ಗೊತ್ತಿದೆ. ಮಹದೇವಪುರದ ಕ್ಷೇತ್ರದಲ್ಲಿ 1,03,000 ಮತಗಳ್ಳತನ ತೋರಿಸಿದ್ದಾರೆ” ಎಂದರು.
“ಫೆ.23ರಂದು 7,250 ವೋಟುಗಳನ್ನು ಡಿಲೀಟ್ ಮಾಡಲಾಗಿದೆ. ಗರುಡಾ ಆಪ್ ಬಳಸಿ ಅನಧಿಕೃತ ವ್ಯಕ್ತಿಗಳು ಅರ್ಜಿ ಹಾಕಿ ಜಾರ್ಖಂಡ್, ಬಿಹಾರದ ಮೊಬೈಲ್ ಸಂಖ್ಯೆ ಬಳಸಿ ಅಕ್ರಮ ಮಾಡಲಾಗಿದೆ. ಆದರೆ ಈ ಬಗ್ಗೆ ತನಿಖೆಗೆ ಚುನಾವಣಾ ಆಯೋಗ ಯಾವುದೇ ಮಾಹಿತಿ ಕೊಡುವುದಿಲ್ಲ. 12 ಬಾರಿ ಅಧಿಕೃತವಾಗಿ ಇಸಿಐಗೆ ಪತ್ರ ಬರೆದರೂ ಯಾವುದೇ ಮಾಹಿತಿ ನೀಡುವುದಿಲ್ಲ. ಸೆ.25ರಂದು ಎಸ್ಐಟಿ ರಚನೆ ಮಾಡಿ ಈಗ ತನಿಖೆ ಮಾಡಲಾಗುತ್ತಿದೆ. ಈಗ ಅದು ಬಿಜೆಪಿ ಅಭ್ಯರ್ಥಿ ಸುಭಾಷ್ ಗುತ್ತೆದಾರ್ ದಾಖಲೆಗಳನ್ನು ಸುಟ್ಟು ಹಾಕಿರುವುದು ಗೊತ್ತಾಗಿದೆ. ರೇಡ್ ಮಾಡಲಾಗಿದೆ” ಎಂದರು.
“ಹರ್ಯಾಣದಲ್ಲೂ ಈಗ ಇದೇ ಮತಗಳ್ಳತನ ಆಗಿದೆ. 25 ಲಕ್ಷ ಮತಗಳ್ಳತನ ಆಗಿರುವುದು ಗೊತ್ತಾಗಿದೆ. ಪ್ರಜಾಪ್ರಭುತ್ವ ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಎಐಸಿಸಿಯ ರಾಷ್ಟ್ತಪತಿಗಳಿಗೆ, ಚುನಾವಣಾ ಆಯೋಗಕ್ಕೆ ಜನರ ಅಭಿಪ್ರಾಯ ತಿಳಿಸಲು ತೀರ್ಮಾನಿಸಿದೆ. ಅದಕ್ಕಾಗಿ ಸಹಿ ಸಂಗ್ರಹ ಅಭಿಯಾನ ಮಾಡಲಾಗುತ್ತಿದೆ.
ರಾಜ್ಯದಲ್ಲಿ 1,12,41,000 ಸಹಿ ಸಂಗ್ರಹ ಮಾಡಲಾಗಿದೆ. ನ.10 ರಂದು ಅದನ್ನು ದೆಹಲಿಗೆ ತಲುಪಿಸಲು ಸೂಚಿಸಲಾಗಿದೆ. ಈ ಬಗ್ಗೆ ನ.25 ದೆಹಲಿ ರಾಮಲೀಲಾ ಮೈದಾನದಲ್ಲಿ ದೊಡ್ಡ ಸಭೆ ನಡೆಸಲು ಚರ್ಚೆ ನಡೆಸಲಾಗುತ್ತಿದೆ. ನಾವೇ ಮೊದಲು ದೆಹಲಿಗೆ ಈ ಸಹಿ ಸಂಗ್ರಹದ ದಾಖಲೆಗಳನ್ನು ತಲುಪಿಸಬೇಕು ಅಂದುಕೊಂಡಿದ್ದೇವೆ. ನ.10ಕ್ಕೆ ಸಹಿ ಸಂಗ್ರಹದ ದಾಖಲೆಗಳನ್ನು ದೆಹಲಿಗೆ ತಲಯಪಿಸುತ್ತೇವೆ. ಇನ್ನೂ ಮೂರು ನಾಲ್ಕು ದಿನಗಳಲ್ಲಿ ಇನ್ನಷ್ಟು ಸಹಿ ಸಂಗ್ರಹ ಮಾಡಬೇಕು” ಎಂದರು.


