ಹಾಂಕಾಂಗ್: ಭಾರತ ತಂಡ ಮಳೆಯಿಂದ ಅಡ್ಡಿಯಾದ ಹಾಂಕಾಂಗ್ ಸಿಕ್ಸರ್ ಪಂದ್ಯದಲ್ಲಿ ಡಕ್ ವರ್ತ್ ಲೂಯಿಸ್ ನಿಯಮದಡಿ ಪಾಕಿಸ್ತಾನ ವಿರುದ್ಧ 2 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ 6 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 84 ರನ್ ಗಳಿಸಿತ್ತು. ಭಾರತದ ಪರ ರಾಬಿನ್ ಉತ್ತಪ್ಪ 11 ಎಸೆತಗಳಲ್ಲಿ 28 ರನ್ ಬಾರಿಸಿದರು.
ಕಠಿಣ ಗುರಿ ಬೆಂಬತ್ತಿದ ಪಾಕಿಸ್ತಾನ ತಂಡ 3 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿತ್ತು. ಎರಡನೇ ಓವರ್ ನಲ್ಲಿ ಸ್ಟುವರ್ಟ್ ಬಿನ್ನಿ 7 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಕಡಿವಾಣ ಹಾಕಿದ್ದರು.
ಈ ಹಂತದಲ್ಲಿ ಸುರಿದ ಮಳೆಯಿಂದಾಗಿ ಪಂದ್ಯ ಮುಂದುವರಿಸಲು ಆಗಲಿಲ್ಲ. ಆಟ ನಿಂತಾದ ದಿನೇಶ್ ಕಾರ್ತಿಕ್ ನೇತೃತ್ವದ ಭಾರತ ತಂಡ ಡಕ್ ವರ್ತ್ ಲೂಯಿಸ್ ನಿಯಮದ ಅಡಿ 2 ರನ್ ಗಳಿಂದ ಮುನ್ನಡೆ ಸಾಧಿಸಿದ್ದರಿಂದ ರೋಚಕ ಗೆಲುವು ದಾಖಲಿಸಿತು.
ಅಬ್ಬಾಸ್ ಅಫ್ರಿದಿ ನೇತೃತ್ವದ ಪಾಕಿಸ್ತಾನ ತಂಡಕ್ಕೆ ಇದು ಮೊದಲ ಸೋಲಾಗಿದೆ. ಇದಕ್ಕೂ ಮೊದಲು ಆಡಿದ ಪಂದ್ಯದಲ್ಲಿ ಆಫ್ರಿದಿ ಒಂದೇ ಓವರ್ ನಲ್ಲಿ ಸತತ 6 ಸಿಕ್ಸರ್ ಸಿಕ್ಸರ್ ಸಿಡಿಸಿ ಹಾಂಕಾಂಗ್ ವಿರುದ್ಧ ಸುಲಭ ಗೆಲುವು ತಂದುಕೊಟ್ಟಿದ್ದರು.


