Menu

ಆಸ್ತಿ ವಿವರ ಸಲ್ಲಿಸದ 5 ಸಚಿವರು 12 ಶಾಸಕರ ಪಟ್ಟಿ ಬಿಡುಗಡೆ

lokayukta

ಬೆಂಗಳೂರು:ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 22(1) ಮತ್ತು (2)ರ ಪ್ರಕಾರ ವಿಧಾನಸಭೆ, ವಿಧಾನಪರಿಷತ್ ಸದಸ್ಯರು ಪ್ರತಿ ವರ್ಷ ಜೂನ್ 30ರೊಳಗೆ ತಮ್ಮ ಹಾಗೂ ಕುಟುಂಬದ ಸದಸ್ಯರ ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿದೆ.

ಆಸ್ತಿ ವಿವರವನ್ನು ನಿಗದಿತ ನಮೂನೆಯಲ್ಲಿ ಇದುವರೆಗೂ ರಾಜ್ಯದ 6 ಸಚಿವರು, 66 ಶಾಸಕರು, 28 ವಿಧಾನಪರಿಷತ್ ಸದಸ್ಯರು(ಎಂಎಲ್​​ಸಿ) ಇದುವರೆಗೂ 2024-25ನೇ ಸಾಲಿನ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಿಲ್ಲ. ಹೀಗಾಗಿ ಲೋಕಾಯುಕ್ತ, ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಆಡಳಿರೂಢ ಕಾಂಗ್ರೆಸ್, ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್​​​ನ ಒಟ್ಟು 66 ಶಾಸಕರು ಇದ್ದಾರೆ.

ಆಸ್ತಿ ವಿವರ ಸಲ್ಲಿಸದ ಸಚಿವರು:

ಕೆ.ಹೆಚ್‌.ಮುನಿಯಪ್ಪ- ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರ ಸಚಿವ
ದಿನೇಶ್ ಗುಂಡೂರಾವ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
ಬಿ.ಝಡ್. ಜಮೀರ್ ಅಹ್ಮದ್ ಖಾನ್-, ವಸತಿ, ವಕ್ಸ್ ಮತ್ತು ಅಲ್ಪ ಸಂಖ್ಯಾತ ಸಚಿವ
ರಹೀಮ್ ಖಾನ್- ಹಜ್, ಪೌರಾಡಳಿತ ಸಚಿವ
ಕೆ. ವೆಂಕಟೇಶ್- ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ

ಆಸ್ತಿ ವಿವರ ಸಲ್ಲಿಸದ ಶಾಸಕರು:

ಕೆ.ಎನ್ ರಾಜಣ್ಣ (ಕಾಂಗ್ರೆಸ್|), ಲಕ್ಷ್ಮಣ ಸವದಿ (ಕಾಂಗ್ರೆಸ್) , ಖನೀಜ್ ಫಾತಿಮಾ ಕಾಂಗ್ರೆಸ್), ಜಿ.ಜನಾರ್ದನ ರೆಡ್ಡಿ (ಕೆಆರ್​​ಪಿಪಿ), ವಿನಯ ಕುಲಕರ್ಣಿ (ಕಾಂಗ್ರೆಸ್), ಬಿ ಕೆ ಸಂಗಮೇಶ್ವರ್ (ಕಾಂಗ್ರೆಸ್), ನಯನಾ ಮೊಟಮ್ಮ (ಕಾಂಗ್ರೆಸ್) , ಬಿ. ಸುರೇಶ್ ಗೌಡ (ಬಿಜೆಪಿ) , ಕೆ.ಗೋಪಾಲಯ್ಯ (ಬಿಜೆಪಿ), ಸಿ.ಪಿ.ಯೋಗೇಶ್ವರ (ಕಾಂಗ್ರೆಸ್), ಹೆಚ್.ಡಿ ರೇವಣ್ಣ (ಜೆಡಿಎಸ್​​), ಸಿ. ಪುಟ್ಟರಂಗಶೆಟ್ಟಿ (ಕಾಂಗ್ರೆಸ್),

Related Posts

Leave a Reply

Your email address will not be published. Required fields are marked *