Thursday, November 06, 2025
Menu

ನ್ಯಾಯಾಲಯ ನ್ಯಾಯದ ದೇವಾಲಯವೇ ಹೊರತು 7-ಸ್ಟಾರ್ ಹೋಟೆಲ್ ಅಲ್ಲ : ಸಿಜೆಐ ಭೂಷಣ್ ಗವಾಯಿ

ನ್ಯಾಯಾಲಯ ನ್ಯಾಯದ ದೇವಾಲಯವಾಗಬೇಕೇ ಹೊರತು 7-ಸ್ಟಾರ್ ಹೋಟೆಲ್ ಅಲ್ಲ, ಮುಂಬೈನಲ್ಲಿ ನಿರ್ಮಾಣವಾಗುತ್ತಿರುವ ಹೊಸ ಬಾಂಬೆ ಹೈಕೋರ್ಟ್ ಸಂಕೀರ್ಣವು ದುಂದುಗಾರಿಕೆಯನ್ನು ತಪ್ಪಿಸಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ಹೇಳಿದ್ದಾರೆ.

ಬಾಂದ್ರಾ (ಪೂರ್ವ)ದಲ್ಲಿ ಸಂಕೀರ್ಣದ ಶಿಲಾನ್ಯಾಸ ನೆರವೇರಿಸಿದ ಮಾತನಾಡಿದ ಗವಾಯಿ, ಹೊಸ ಕಟ್ಟಡವು ಸಂವಿಧಾನದಲ್ಲಿ ಅಳವಡಿಸಲಾಗಿರುವ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿರಬೇಕು. ದುಂದುಗಾರಿಕೆ ತ್ಯಜಿಸಬೇಕು. ನ್ಯಾಯಾಧೀಶರು ಊಳಿಗಮಾನ್ಯ ಪ್ರಭುಗಳಲ್ಲ. ಏಕೆಂದರೆ ಅವರನ್ನು ಸಾಮಾನ್ಯ ನಾಗರಿಕರಿಗೆ ಸೇವೆ ಸಲ್ಲಿಸಲು ನೇಮಿಸಲಾಗುತ್ತದೆ ಎಂದು ಸಿಜೆಐ ಅಭಿಪ್ರಾಯಪಟ್ಟರು.

ಹೈಕೋರ್ಟ್, ವಿಚಾರಣಾ ನ್ಯಾಯಾಲಯ, ಸುಪ್ರೀಂ ಕೋರ್ಟ್, ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದ ಎಲ್ಲಾ ಸಂಸ್ಥೆಗಳು ದೇಶದ ಕೊನೆಯ ಪ್ರಜೆಗೆ ಸೇವೆ ಸಲ್ಲಿಸಲು ಸಂವಿಧಾನದಡಿ ಕಾರ್ಯನಿರ್ವಹಿಸುತ್ತವೆ ಎಂದರು.

ಕಟ್ಟಡದ ಭವ್ಯತೆ ಮತ್ತು ಸಾಂಪ್ರದಾಯಿಕ ರಚನೆ ಕಾಪಾಡಿಕೊಳ್ಳಲುಮನವಿ ಮಾಡಿದ ಗವಾಯಿ, ನ್ಯಾಯಾಲಯ ಕಟ್ಟಡಗಳನ್ನು ಯೋಜಿಸುವಾಗ ನ್ಯಾಯಾಧೀಶರ ಅಗತ್ಯತೆಗಳ ಮೇಲೆ ಕೇಂದ್ರೀಕರಿಸುತ್ತೇವೆ, ಆದರೆ ನಾವು ನಾಗರಿಕರ, ದಾವೆದಾರರ ಅಗತ್ಯಗಳಿಗಾಗಿ ಅಸ್ತಿತ್ವದಲ್ಲಿದ್ದೇವೆ ಎಂಬುದನ್ನು ಮರೆಯಬಾರದು ಎಂದು ಹೇಳಿದರು.

ಈ ಕಾರ್ಯಕ್ರಮದ ಭಾಗವಾಗಲು ನನಗೆ ಇಷ್ಟವಿರಲಿಲ್ಲ. ಆದರೆ ಈಗ ನಾನು ಬಾಂಬೆ ಹೈಕೋರ್ಟ್‌ನಲ್ಲಿ ತಮ್ಮ ಕರ್ತವ್ಯಗಳನ್ನು ನಿರ್ವಹಿಸಿದ ನ್ಯಾಯಾಧೀಶನಾಗಿ ಇಂದು ಒಂದು ಸ್ಮರಣೀಯ ಕ್ಷಣ, ಬಾಂಬೆ ಹೈಕೋರ್ಟ್‌ನ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *