ಸೂಪರ್ ಹಿಟ್ ಚಿತ್ರವಾದ ದೃಶ್ಯಂ ಸಿನಿಮಾ ಶೈಲಿಯಲ್ಲಿ ಗಂಡನನ್ನು ಕೊಂದ ಪತ್ನಿ ಮನೆಯೊಳಗೆ ಸಮಾಧಿ ಮಾಡಿದ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ಮುಂಬೈನಿಂದ 70 ಕಿ.ಮೀ. ದೂರದಲ್ಲಿರುವ ಪಾಲ್ಟರ್ ಜಿಲ್ಲೆಯ ನಲಸೋಪರ ಪೂರ್ವದ ಗಡ್ಗಪದ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪತಿ ವಿಜಯ್ ಚೌಹಾಣ್ (35)ನನ್ನು ಪತ್ನಿ ಕೋಮಲ್ ಚೌಹಾಣ್ (28) ಪ್ರಿಯಕರನ ಸಹಾಯದಿಂದ ಕೊಂದು ಮನೆಯೊಳಗೆ ಹೂತು ಹಾಕಿದ್ದಾಳೆ.
15 ದಿನಗಳಿಂದ ನಾಪತ್ತೆಯಾಗಿದ್ದ ವಿಜಯ್ ಗಾಗಿ ಸೋದರರು ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ವಿಜಯ್ ಮನೆಗೆ ಔಪಚಾರಿಕವಾಗಿ ಭೇಟಿ ನೀಡಿದಾಗ ಮನೆಯ ಟೈಲ್ಸ್ ಗಳ ಬಣ್ಣ ಬದಲಾಗಿದ್ದು, ಒಂದಕ್ಕೊಂದು ಹೊಂದಾಣಿಕೆ ಆಗದೇ ಇರುವುದನ್ನು ಗಮನಿಸಿದ್ದಾರೆ.
ಟೈಲ್ಸ್ ಗಳನ್ನು ತೆಗೆದು ನೋಡಿದಾಗ ಕೆಟ್ಟ ವಾಸನೆ ಬಂದಿದೆ. ಅನುಮಾನ ಬಂದು ಇನ್ನಷ್ಟು ಅಗೆದು ನೋಡಿದಾಗ ಸೋದರನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ವಿಜಯ್ ಚವಾಣ್ ಕೋಮಲ್ ಎರಡು ದಿನಗಳಿಂದ ನಾಪತ್ತೆಯಾಗಿದ್ದು, ಕೋಮಲ್ ನೆರೆಹೊರೆಯ ಮೋನು ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಇಬ್ಬರೂ ಸೇರಿ ಕೊಲೆ ಮಾಡಿದ್ದಾರೆ ತಿಳಿದು ಬಂದಿದ್ದು, ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.