ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ , ಪವಿತ್ರಾಗೌಡ ಸೇರಿ ಇತರ ಆರೋಪಿಗಳ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.
ದರ್ಶನ್ ಪರ ಕಪಿಲ್ ಸಿಬಲ್ ವಾದ ಮಂಡಿಸಬೇಕಿತ್ತು. ಆದರೆ ಅವರಿಗೆ ಬೇರೆ ಪ್ರಕರಣದಲ್ಲಿ ಇಂದು ವಾದ ಮಂಡಿಸಬೇಕಿದೆ. ನಿನ್ನೆ ರಾತ್ರಿ ನನಗೆ ಈ ಕೇಸ್ ಬಂತು. ಇಷ್ಟು ಬೇಗ ಕೇಸ್ನ ವಾದ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಂದು ದಿನದ ಸಮಯ ಕೇಳಿದ್ದೇನೆ. ಇದಕ್ಕೆ ಸುಪ್ರೀಂಕೋರ್ಟ್ ಸಮ್ಮತಿ ಕೊಟ್ಟಿದೆ. ಈ ಅರ್ಜಿ ವಿಚಾರಣೆ ಗುರುವಾರಕ್ಕೆ ಮುಂದೂಡಿಕೆಯಾಗಿದೆ ಎಂದು ಎಂದು ದರ್ಶನ್ ಪರ ಹಿರಿಯ ವಕೀಲ ಸಿದ್ದಾರ್ಥ್ ದವೆ ಹೇಳಿದ್ದಾರೆ.
ಸರ್ಕಾರದ ಪರ ವಿಚಾರಣೆ ನಡೆಸಿರುವ ಸುಪ್ರಿಂ ಕೋರ್ಟ್ ಇಂದು ದರ್ಶನ್ ಸೇರಿ 7 ಆರೋಪಿಗಳ ಪರ ವಾದ ಆಲಿಸಬೇಕಿತ್ತು, ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾ.ಜೆ ಬಿ ಪಾರ್ದಿವಾಲಾ ನೇತೃತ್ವದ ದ್ವಿಸದಸ್ಯ ಪೀಠ ನಡೆಸುತ್ತಿದೆ. ರಾಜ್ಯ ಸರ್ಕಾರ ಪರ ವಕೀಲರ ವಾದವನ್ನು ಈಗಾಗಲೇ ಆಲಿಸಿರುವವ ಪೀಠ, ಆರೋಪಿಗಳ ಪರ ವಕೀಲರ ವಾದ ಮಂಡನೆ ಆಲಿಸಿ ಅಂತಿಮ ತೀರ್ಪು ಪ್ರಕಟಿಸಬೇಕಿದೆ.
ಕರ್ನಾಟಕ ಸರ್ಕಾರ, ಪೊಲೀಸ್ ಇಲಾಖೆ ಪರವಾಗಿ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ವಾದ ಮಂಡಿಸಿದ್ದರು. ದರ್ಶನ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ವಾದಕ್ಕೆ ನಿಯೋಜನೆಗೊಂಡವರು. ಬಳಿಕ ಕಪಿಲ್ ಸಿಬಲ್ ಅವರನ್ನು ನೇಮಿಸಿಕೊಂಡಿದ್ದರು. ಆದರೆ ಇನ್ನು ಸಿದ್ದಾರ್ಥ್ ದವೆ ವಾದ ಮಂಡಿಸಲಿದ್ದಾರೆ.