ಬೆಂಗಳೂರಿನ PFO ಸ್ಟಾಫ್ ಕೋ ಆಪರೇಟಿವ್ ಸೊಸೈಟಿಯಲ್ಲಿ 70 ಕೋಟಿ ರೂ .ವಂಚನೆ ಪ್ರಕರಣ ಬಯಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನೆರಡು ದಿನದಲ್ಲಿ ಪ್ರಕರಣದ ಪ್ರಾಥಮಿಕ ತನಿಖೆ ಬಳಿಕ ಸಿಐಡಿಗೆ ವರ್ಗಾವಣೆಯಾಗಲಿದೆ. ಸದ್ಯ ಪ್ರಕರಣದ ತನಿಖೆಯನ್ನು ಕೇಂದ್ರ ವಿಭಾಗ ಡಿಸಿಪಿ ಅಕ್ಷಯ್ ನೇತೃತ್ವದಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ನಡೆಸುತ್ತಿದ್ದಾರೆ.
ಸೊಸೈಟಿಯ ಸಿಇಒ ಗಿಂತಲೂ ಆರೋಪಿ ಅಕೌಂಟೆಂಟ್ ಜಗದೀಶ್ ಅಧಿಕ ಆಸ್ತಿ ಗಳಿಸಿದ್ದಾನೆ. 21 ಸಾವಿರ ಸಂಬಳವಿದ್ದು, ಕೋಟ್ಯಾಂತರ ಮೌಲ್ಯದ ಆಸ್ತಿ ಮಾಡಿದ್ದ. ತಲೆಮರೆಸಿಕೊಂಡಿರುವ ಜಗದೀಶ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಆತನ ವಂಚನೆಯಲ್ಲಿ ಸಂಪೂರ್ಣ ಜವಾಬ್ದಾರಿ ವಹಿಸಿದ್ದ ಪತ್ನಿ ಲಕ್ಷ್ಮೀ ಮತ್ತು ಸೊಸೈಟಿಯ ಸಿಇಓ ಗೋಪಿನಾಥ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಜಗದೀಶ್ ಪತ್ನಿಯೊಂದಿಗೆ ಸೇರಿಕೊಂಡು ವಂಚನೆಗೆ ಇಳಿದಿದ್ದು, ಅಕೌಂಟ್‌ಗಳ ಸಂಪೂರ್ಣ ಜವಾಬ್ದಾರಿಯನ್ನು ಪತ್ನಿ ಲಕ್ಷ್ಮೀಗೆ ನೀಡಿದ್ದ. ಹಲವು ಅಕೌಂಟ್ ಮುಖಾಂತರ ಹಣದ ವ್ಯವಹಾರ ನಡೆಸುತ್ತಿದ್ದ. ಬೇರೆಯವರ ಹೆಸರಲ್ಲಿ ಅಕೌಂಟ್ ಮಾಡಿ ಹಣವಿಡುತ್ತಿದ್ದ. ಐಶಾರಾಮಿ ಕಾರು,ಮನೆ ಫಾರ್ಮ್ ಹೌಸ್ ಮಾಡಿಕೊಂಡಿದ್ದ.
ಹೂಡಿಕೆದಾರರ ಹಣ ಬ್ಯಾಂಕ್ ಸೇರುವ ಬದಲು ಆರೋಪಿಗಳ ಕೈ ಸೇರ್ತಿತ್ತು. ಹೂಡಿಕೆದಾರರು ಪ್ರಶ್ನೆ ಮಾಡ್ತಿದ್ದಂತೆ ಜಗದೀಶ್ ಪರಾರಿಯಾಗಿದ್ದಾನೆ. ಆತನ ಅಂಜನಾಪುರ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ ಸಾಖಲೆಗಳು ಮತ್ತು ಅರ್ಧ ಕೆಜಿ ಚಿನ್ನಾಭರಣ ಪತ್ತೆ ಮಾಡಿದ್ದಾರೆ.


