ಯುವಕನ ಕಿರುಕುಳದಿಂದ ಬೇಸತ್ತ ಕಲಬುರಗಿಯ ಕಮಲಾಪುರದ ಕುರಿಕೋಟ ಬ್ರಿಡ್ಜ್ ಮೇಲಿಂದ ಜಿಗಿದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭೂಷಣಗಿ ಗ್ರಾಮದ ಸಾಕ್ಷಿ (22) ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ. ಆಸ್ಪತ್ರೆ ಹೋಗುವುದಾಗಿ ಹೇಳಿ ಸಹೋದರಿ ಜೊತೆ ಬಂದಿದ್ದ ಸಾಕ್ಷಿ ಕುರಿಕೋಟ ಬ್ರಿಡ್ಜ್ ಮೇಲಿಂದ ಬೆಣ್ಣೆತೋರ ಡ್ಯಾಂ ಹಿನ್ನೀರಿಗೆ ಹಾರಿದ್ದಾಳೆ.
ಕಮಲಾಪುರ ತಾಲೂಕಿನ ರಾಜನಾಳ ಗ್ರಾಮದ ಯುವಕ ಅಭಿಷೇಕ್ ಯುವತಿ ಜೊತೆಗಿದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಯುವತಿಗಾಗಿ ಶೋಧಕಾರ್ಯ ಮುಂದುವರಿದಿದ್ದು, ಮಹಾಗಾಂವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.