ಮಂಗಳೂರಿನ ಕಾವೂರು ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿನಗರದಲ್ಲಿ ಕುಟುಂಬ ಕಲಹ ಕಾರಣ ಪುಟ್ಟ ಮಗಳೊಂದಿಗೆ ಆತ್ಮಹತ್ಯೆ ಗೆ ಯತ್ನಿಸಿದ್ದ ರಾಜೇಶ್ ಎಂಬವರನ್ನು ಪಣಂಬೂರು ಪೊಲೀಸರು ರಕ್ಷಿಸಿದ್ದಾರೆ.
ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಒಳನುಗ್ಗಿದ ಪೊಲೀಸರು ಮಗು ಹಾಗೂ ರಾಜೇಶ್‌ರನ್ನು ರಕ್ಷಿಸುಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೊದಲು ತಣ್ಣಿರುಬಾವಿ ಕಡಲ ಕಿನಾರೆಗೆ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ತೆರಳಿದ್ದ ರಾಜೇಶ್, ಮೊಬೈಲ್‌ನಲ್ಲಿ ವೀಡಿಯೊ ಮಾಡಿಕೊಂಡು ಅಕ್ಕ ಮತ್ತು ಇತರ ಸಂಬಂಧಿಕರಿಗೆ ಕಳಿಸಿದ್ದರು. ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗಿ ಪೊಲೀಸರ ಕೈ ಸೇರಿತ್ತು, ಅದನ್ನು ನೋಡಿ, ತಣ್ಣಿರು ಬಾವಿ ಬೀಚ್ ಗೆ ತೆರಳಿ ತಲಾಶ್ ನಡೆಸಿದ್ದ ಪಣಂಬೂರು ಪೊಲೀಸರು
ತಂದೆ ಮಗಳು ಪತ್ತೆಯಾಗದಿದ್ದಾಗ ಮೊಬೈಲ್ ಲೊಕೇಷನ್ ಪತ್ತೆ ಮಾಡಿ ಕಾವೂರು ಶಾಂತಿ ನಗರದಲ್ಲಿರುವ ರಾಜೇಶ್ ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಮನೆ ಬಾಗಿಲು ಮುರಿದು ಒಳ ನುಗ್ಗಿ ಪೊಲೀಸರು ರಕ್ಷಿಸಿದ್ದಾರೆ.
ರಾಜೇಶ್ ಏಳು ವರ್ಷಗಳ ಹಿಂದೆ ಬಜ್ಪೆ ಮೂಲದ ಯವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು, ಕೆಲವು ಸಮಯದಿಂದ ಪತಿ ಪತ್ನಿಯ ನಡುವೆ ಜಗಳವಿದ್ದು, ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ರಾಜೇಶ್ ಯೋಚಿಸಿದ್ದರು. ರಾಜೇಶ್ ಮತ್ತು ಪತ್ನಿಯನ್ನು ಪೊಲೀಸರು ಠಾಣೆಗೆ ಕರೆಸಿ ಮನ ಒಲಿಸಿ ಕಳುಹಿಸಿಕೊಟ್ಟಿದ್ದಾರೆ.


