ಬಿಕ್ಲು ಶಿವು ಕೊಲೆ ಪ್ರಕರಣ ಸಂಬಂಧ ಭಾರತಿ ನಗರ ಪೊಲೀಸರು ಶಾಸಕ ಭೈರತಿ ಬಸವರಾಜ್ ಅಣ್ಣನ ಮಗ ಅನಿಲ್ ಸೇರಿದಂತೆ ಮತ್ತೆ ಇಬ್ಬರನ್ನು ಅರೆಸ್ಟ್ ಮಾಡಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ 14 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಈ ಹಿಂದೆ ಭೈರತಿ ಬಸವರಾಜ್ ಅವರನ್ನು ವಿಚಾರಣೆ ನಡೆಸಿತ್ತು.
ಈವರೆಗೆ ಪ್ರಕರಣ ಸಂಬಂಧ ಪೊಲೀಸರು ಒಟ್ಟು 7 ಜನರನ್ನು ಬಂಧಿಸಿದ್ದಾರೆ. ಕೊಲೆ ಆರೋಪಿಗಳಿಗೆ ಕಾರು ಒದಗಿಸಿದ್ದು ಅನಿಲ್ ಅನ್ನುವುದು ತನಿಖೆ ವೇಳೆ ದೃಢಪಟ್ಟಿದೆ. ಸ್ಕಾರ್ಪಿಯೊ ಕಾರಲ್ಲಿ ಬಂದು ಕೊಲೆ ಮಾಡಿ ಆರೋಪಿಗಳು ಪರಾರಿ ಆಗಿದ್ದರು. ಕೊಲೆಗೆ ಬಳಕೆಯಾದ ಕಾರು ಯಾರದು ಎಂಬ ತನಿಖೆ ನಡೆಯುತ್ತಿರುವಾಗ ಅನಿಲ್ ತಲೆ ಮರೆಸಿಕೊಂಡಿದ್ದ.
ಕಾರ್ ಕೊಟ್ಟವರಿಗೆ ಪೊಲೀಸರು ಸ್ರು ಬಲೆ ಬೀಸಿದ ಹೊತ್ತಲ್ಲೆ ಅನಿಲ್ ತಲೆ ಮರೆಸಿಕೊಂಡಿದ್ದ. ಈಗ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆ ಆರೋಪಿ ಜಗದೀಶ್ ಎಂಬವನಿಗೆ ಶಾಸಕ ಬೈರತಿ ಬಸವರಾಜ್ ಶ್ರೀರಕ್ಷೆ ಎಂಬ ಆರೋಪ ಕೇಳಿ ಬಂದಿದೆ.
ಮಾಜಿ ರೌಡಿ ಶೀಟರ್ ಜಗದೀಶನಿಗೆ ಸಿನಿಮಾ ನಂಟು ಕೂಡ ಇದೆ. ನಟಿ ರಚಿತಾ ರಾಮ್ ಗೆ ರೇಷ್ಮೆ ಸೀರೆ, ಚಿನ್ನದ ಹಾರ, ಓಲೆ ಗಿಪ್ಟ್ ಕೊಟ್ಟಿರುವ ಪೋಟೊ ವೈರಲ್ ಆಗಿದೆ. ರಚಿತಾ ರಾಮ್ ಜೊತೆಗೆ ರವಿಚಂದ್ರನ್, ಸುದೀಪ್ ಜೊತೆಗೂ ಆಪ್ತವಾಗಿರುವ ಪೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿವೆ. ಆರೋಪಿ ಕೆಲವು ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದಾನೆ ಎನ್ನಲಾಗಿದೆ.