Tuesday, November 04, 2025
Menu

ನ. 26ರ ನಂತರ ಡಿಕೆ ಶಿವಕುಮಾರ್ ಸಿಎಂ ಆಗೇ ಆಗ್ತಾರೆ: ವೆಂಕಟೇಶ ಗುರೂಜಿ ಭವಿಷ್ಯ

dk shivakuamr

ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ನವೆಂಬರ್ 26ರ ಬಳಿಕ ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ ಎಂದು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಗ್ಗುಂಜಿ ಮಠದ ವೆಂಕಟೇಶ ಗುರೂಜಿ ಭವಿಷ್ಯ ನುಡಿದಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಕುರಿತು ಭಾರೀ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ವೆಂಕಟೇಶ ಗುರೂಜಿ ಅವರ ಭವಿಷ್ಯ ಭಾರೀ ಕುತೂಹಲ ಮೂಡಿಸಿದೆ. ಏಕೆಂದರೆ ನವೆಂಬರ್ ಎರಡನೇ ವಾರದಲ್ಲಿ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಭೇಟಿ ಮಾಡಲಿದ್ದು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.  ಆದರೆ ಸಂಪುಟ ವಿಸ್ತರಣೆಯೋ ಅಥವಾ ಮುಖ್ಯಮಂತ್ರಿ ಬದಲಾವಣೆಯೋ ಎಂಬುದು ಕಾದು ನೋಡಬೇಕಾಗಿದೆ.

ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ನವೆಂಬರ್ 26ರ ಬಳಿಕ ಡಿ.ಕೆ ಶಿವಕುಮಾರ್‌ (DK Shivakumar) ಸಿಎಂ ಆಗೋದನ್ನ ಯಾರೂ ತಡೆಯೋಕಾಗಲ್ಲ ಅಂತ ಭವಿಷ್ಯ ನುಡಿದಿದ್ದಾರೆ.

ನವೆಂಬರ್ 26ರ ಬಳಿಕ ಡಿಕೆಶಿ ಸಿಎಂ ಆಗೋದ್ನ ಯಾರೂ ತಡೆಯಲಾಗದು. ಡಿಕೆಶಿ ಸಿಎಂ ಆದ್ರೂ ಕೇವಲ ಒಂದೂವರೆ ವರ್ಷ ಅಷ್ಟೆ ಅಧಿಕಾರ ಮಾಡೋದು ಅಂತ ಅವರು ಹೇಳಿದ್ದಾರೆ.

ಡಿಕೆ ಶಿವಕುಮಾರ್‌ ಅವರಿಗೆ ಸಿಎಂ ಯೋಗ ಇದೆ, ಆಗೇ ಆಗ್ತಾರೆ. 2031ರವರೆಗೆ ರಾಜನಂತೆ ಇರ್ತಾರೆ. ಏಕೆಂದ್ರೆ ಡಿಕೆಶಿ ಜಾತಕದಲ್ಲಿ ರಾಜಲಕ್ಷ್ಮಿ ಯೋಗ ಇದೆ. ಈ ಯೋಗ ಎಲ್ಲರಿಗೂ ಇರಲ್ಲ, ಅವರ ಜಾತಕದಲ್ಲಿ ಇದೆ. ಹಾಗಾಗಿ ಸಿಎಂ ಆಗೇ ಆಗ್ತಾರೆ ಎಂದು ಅವರು ಹೇಳಿದರು.

ಒಂದೂವರೆ ವರ್ಷದ ಹಿಂದೆಯೇ ಅವರಿಗೆ ಹೇಳಿ ಮಂತ್ರಾಕ್ಷತೆ ಕೊಟ್ಟಿದ್ದೇನೆ. ಅವರಿಗೆ ಮುಖ್ಯಮಂತ್ರಿ ಯೋಗ ಇದೆ, ಅದನ್ನ ಯಾರೂ ತಪ್ಪಿಸಲು ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

Related Posts

Leave a Reply

Your email address will not be published. Required fields are marked *