ಬೆಂಗಳೂರು: ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್)ಗೆ ನೂತನ ವ್ಯವಸ್ಥಾಪಕ ನಿರ್ದೇಶಕ ವ್ಯವಸ್ಥಾಪಕ ನಿರ್ದೇಶಕರಾಗಿ ಐಎಎಸ್ ಅಧಿಕಾರಿ ಡಾ.ಜೆ.ರವಿಶಂಕರ್ ಅವರನ್ನು ರಾಜ್ಯ ಸರ್ಕಾರ ನೇಮಿಸಿದೆ.
ಮೆಟ್ರೋ ಪ್ರಯಾಣ ದರವನ್ನು ಗಣನೀಯವಾಗಿ ಹೆಚ್ಚಿಸಿದ್ದಕ್ಕಾಗಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಮಹೇಶ್ವರ್ ರಾವ್ ಬಿಎಂಆರ್‌ಸಿಎಲ್ ನೂತನ ಎಂಡಿಯಾಗಿ ಡಾ.ಜೆ. ರವಿಶಂಕರ್ ಅವರನ್ನು ಸರಕಾರ ನೇಮಕ ಮಾಡಿದೆ.
ಬಿಬಿಎಂಪಿ ಮುಖ್ಯ ಆಯುಕ್ತರಾಗಿರುವ ಮಹೇಶ್ವರ ರಾವ್ ಅವರು ಬಿಎಂಆರ್‌ಸಿಎಲ್‌ನ ಹೆಚ್ಚುವರಿ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಕೇಂದ್ರದಿಂದ ಅನುಮೋದನೆ ಪಡೆದ ನಂತರ ಮಹೇಶ್ವರ ರಾವ್ ಅವರನ್ನು 2024ರ ಜನವರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ನ ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಯಿತು. ಆದಾಗ್ಯೂ, ರಾಜ್ಯ ಸರಕಾರ 2025ರ ಏಪ್ರಿಲ್‌ನಲ್ಲಿ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತರನ್ನಾಗಿ ನೇಮಿಸಿತು.
ರವಿಶಂಕರ್ ಪ್ರಸ್ತುತ ರಾಜ್ಯ ಕೃಷಿ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ನಲ್ಲಿ ಉನ್ನತ ಹುದ್ದೆಗೆ ನೇಮಕವಾದ ಅವರಿಗೆ, ಆರ್‌ವಿ ರಸ್ತೆ ಮತ್ತು ಬೊಮ್ಮಸಂದ್ರ (ಹಳದಿ ಮಾರ್ಗ) ಮಾರ್ಗದಲ್ಲಿ ಶೀಘ್ರ ವಾಣಿಜ್ಯ ಸಂಚಾರ ಆರಂಭಿಸುವುದು ಮತ್ತು ಹೆಬ್ಬಾಳ ಡಿಪೋ ನಿರ್ಮಾಣ ಸ್ಥಾಪನೆಯಂತಹ ಹಲವು ಸವಾಲುಗಳಿವೆ.