Menu

ಜೀ ಕುಟುಂಬದಿಂದ ಹೊಸ ಚಾನೆಲ್ `ಜೀ ಪವರ್’ ಆರಂಭ

zee power

ಬೆಂಗಳೂರು: ಮಾಧ್ಯಮ ಹಾಗೂ ಮನರಂಜನಾ ಸಂಸ್ಥೆ ಜೀ ಬ್ರ್ಯಾಂಡ್ 854 ದಶಲಕ್ಷ ವೀಕ್ಷಕರನ್ನು 208 ದಶಲಕ್ಷ ಮನೆಗಳನ್ನು ತಲುಪಿದ್ದು, ಜನರೊಂದಿಗಿನ ಈ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲು “ನಿಮ್ಮ ನಂಬಿಕೆಯ Z” ಎಂಬ ಹೊಸ ಟ್ಯಾಗ್‌ಲೈನ್‌ನೊಂದಿಗೆ ಮತ್ತಷ್ಟು ಹತ್ತಿರವಾಗಿದೆ. ‘Z What’s Next’ ಯೋಜನೆ ಮೂಲಕ ಜೀ಼ ತನ್ನ ಕಂಟೆಂಟ್ ಮತ್ತು ತಂತ್ರಜ್ಞಾನದ ಶಕ್ತಿಯನ್ನು ಬಳಸಿಕೊಂಡು ಮನರಂಜನೆ ಕ್ಷೇತ್ರದಲ್ಲಿ ಹೊಸ ಭಾಷ್ಯ ಬರೆಯಲು ಮುಂದಾಗಿದೆ.

Z What’s Next’ ಎಂಬುದು ಉದ್ಯಮದಲ್ಲೇ ಜೀ ಬ್ರ್ಯಾಂಡ್‌ನಿಂದ ಮೊದಲ ಬಾರಿಗೆ ಪ್ರಾರಂಭವಾಗಿರುವ ನೂತನ ಯೋಜನೆಯಾಗಿದೆ. ಜೀ ಪಾಲುದಾರರೊಂದಿಗೆ ಜೊತೆಗೂಡಿ ಸಾಂಸ್ಕೃತಿಕವಾಗಿ ಕಂಟೆಂಟ್‌ಗಳನ್ನು ಎಲ್ಲಾ ಡಿವೈಸ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳಲ್ಲಿ ತಡೆರಹಿತವಾಗಿ ಒದಗಿಸುವ ಮೂಲಕ ಮನರಂಜನೆಯನ್ನು ಮರುಕಲ್ಪಿಸುತ್ತಿದೆ. ಈ ಯೋಜನೆಯು ಸೃಜನಶೀಲತೆ, ತಂತ್ರಜ್ಞಾನ ಮತ್ತು ಸಂಸ್ಕೃತಿಯ ಸಮ್ಮಿಲನವನ್ನು ಒಳಗೊಂಡಿದ್ದು, ಮಾರುಕಟ್ಟೆದಾರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. 30 ಸೆಕೆಂಡ್‌ಗಳ ಜಾಹೀರಾತುಗಳನ್ನು ಕಥಾನಕದ ಪಾತ್ರಗಳಾಗಿ ಪರಿವರ್ತಿಸುವ ಮೂಲಕ ಜೀ ಭಾರತದ ಮನರಂಜನೆಯ ಭವಿಷ್ಯವನ್ನು ರೂಪಿಸಲು ಪಾಲುದಾರರನ್ನು ಆಹ್ವಾನಿಸುತ್ತಿದೆ.

ಜೀ ಎರಡು ಹೊಸ ಹೈಬ್ರಿಡ್ ಚಾನೆಲ್‌ಗಳನ್ನು ‘Z What’s Next’ ಯೋಜನೆಯಡಿ ಬಿಡುಗಡೆ ಮಾಡಲಿದೆ. ಕರ್ನಾಟಕದ ಯುವ ಪೀಳಿಗೆಗಾಗಿ ವಿನ್ಯಾಸಗೊಳಿಸಲಾದ ಕನ್ನಡದ ಹೈಬ್ರಿಡ್ ಚಾನೆಲ್ ಮಹತ್ವಾಕಾಂಕ್ಷೆಯ ಕಥೆಗಳ ಮೂಲಕ ಕನ್ನಡಿಗರ ಮನ ಸೂರೆಗೊಳ್ಳಲು ತಯಾರಾಗಿದೆ. ಆಗಸ್ಟ್‌ನಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮಲ್ಟಿಮೀಡಿಯಾ ಅಭಿಯಾನದೊಂದಿಗೆ ಇದು ಅಧಿಕೃತವಾಗಿ ಬಿಡುಗಡೆಯಾಗಲಿದೆ. ಚಾನೆಲ್‌ನಲ್ಲಿ ಆರಂಭದಲ್ಲಿ 5 ಧಾರಾವಾಹಿಗಳು, 1 ದೈನಂದಿನ ರಿಯಾಲಿಟಿ ಶೋ ಮತ್ತು ದಿನನಿತ್ಯ ಸಿನಿಮಾ ಪ್ರಸಾರವಾಗಲಿದೆ.

ಜೀ ಸೋನಾರ್ ಬಾಂಗ್ಲಾ
ಬಂಗಾಳಿ ಭಾಷಿಕ ವೀಕ್ಷಕರಿಗಾಗಿ ರೂಪಿಸಲಾದ ಭಾರತದ ಮೊದಲ ಬಂಗಾಳಿ ಹೈಬ್ರಿಡ್ ಚಾನೆಲ್. ಇದು ಕಾದಂಬರಿ, ಕಾಲ್ಪನಿಕವಲ್ಲದ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು ಹೊಸ ಸ್ವರೂಪದ ಕಂಟೆಂಟ್‌ಗಳೊಂದಿಗೆ ಸಾಂಸ್ಕೃತಿಕವಾಗಿ ಬೇರೂರಿರುವ ಆಧುನಿಕ ವೀಕ್ಷಕರಿಗಾಗಿ ರೂಪುಗೊಂಡಿದೆ. ಆಗಸ್ಟ್‌ನಲ್ಲಿ ಕೋಲ್ಕತ್ತಾದಿಂದ ಪಶ್ಚಿಮ ಬಂಗಾಳದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ ಮಾಧ್ಯಮ ಅಭಿಯಾನದೊಂದಿಗೆ ಬಿಡುಗಡೆಯಾಗಲಿದೆ.

11 ಭಾಷೆಗಳಲ್ಲಿ 50 ಚಾನೆಲ್‌ಗಳೊಂದಿಗೆ ಜೀ ಭಾರತದಾದ್ಯಂತ ವೀಕ್ಷಕರ ಮನಗೆದ್ದಿದೆ. ಟೆಲಿವಿಷನ್, ಒಟಿಟಿ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಗೆ ಹೊಂದಿಕೊಂಡಿರುವ ಜೀ ನ ಕಂಟೆಂಟ್ ಭಾವನಾತ್ಮಕವಾಗಿ ಮಾತ್ರವಲ್ಲದೆ ದೃಶ್ಯಾತ್ಮಕವಾಗಿ ವೀಕ್ಷಕರಿಗೆ ಆಪ್ತವಾಗಿದೆ. ‘Z What’s Next’ ಕಂಟೆಂಟ್-ತಂತ್ರಜ್ಞಾನ ಸಾಮರ್ಥ್ಯವನ್ನು ಒಳಗೊಂಡಿದ್ದು, ಭಾರತದ ಮನರಂಜನೆಯ ಭವಿಷ್ಯವನ್ನು ರೂಪಿಸುವ ಗುರಿ ಸಾಧಿಸಲಿದೆ.

ಸಂಸ್ಥೆಯ ದಕ್ಷಿಣ ಮತ್ತು ಪಶ್ಚಿಮ ವಿಭಾಗದ ಮುಖ್ಯ ಕ್ಲಸ್ಟರ್ ಅಧಿಕಾರಿ ಸಿಜು ಪ್ರಭಾಕರನ್, “ಕರ್ನಾಟಕದ ಕನ್ನಡಿಗರ ಮನದಾಳವನ್ನು ಅರಿತು, ಕನ್ನಡ ಸಂಸ್ಕೃತಿಗೆ ತಕ್ಕಂತೆ ಕಥೆಗಳನ್ನು ರೂಪಿಸಿ, ಜೀ ಕನ್ನಡ ಕಿರುತೆರೆಯಲ್ಲಿ ಪಾರಮ್ಯ ಹೊಂದಿದೆ. ಕನ್ನಡಿಗರು ಎಲ್ಲಾ ರೀತಿಯ ಕಂಟೆಂಟ್‌ಗಳನ್ನು ಉತ್ಸಾಹದಿಂದ ಸ್ವೀಕರಿಸುತ್ತಾರೆ, ಇದು ನಮಗೆ ಮತ್ತಷ್ಟು ಆವಿಷ್ಕಾರಕ್ಕೆ ಪ್ರೇರಣೆ ನೀಡುತ್ತದೆ. ಜೀ ಕನ್ನಡ ಕೌಟುಂಬಿಕ ವೀಕ್ಷಕರಿಗೆ ಮನರಂಜನೆಯನ್ನು ಮುಂದುವರಿಸಿದರೆ, ಜೀ ಪವರ್ ಯುವ ಪೀಳಿಗೆಯನ್ನು ಆಕರ್ಷಿಸುವ ಶಕ್ತಿಯುತ ಕಥೆಗಳನ್ನು ನೀಡಲಿದೆ ಎಂದು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *