Menu

ಪಾಂಡವಪುರದಲ್ಲಿ ಭಿನ್ನ ಕೋಮುಗಳ ಯುವತಿ ಯುವಕ ಪರಾರಿ: ಚಿನಕುರುಳಿ ಗ್ರಾಮ ಪ್ರಕ್ಷುಬ್ಧ

ಮಂಡ್ಯದ ಪಾಂಡವಪುರ ಚಿನಕುರುಳಿ ಗ್ರಾಮದ ಹಿಂದೂ ಯುವತಿ ಸಹನಾ ಮತ್ತು ಗ್ರಾಮದ ಮಟನ್ ಶಾಪ್​ನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕ ಮುದಾಸಿರ್ ಪಾಷ ಪರಾರಿಯಾಗಿದ್ದಾರೆ.

ಅನ್ಯಧರ್ಮದ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಮನೆ ಬಿಟ್ಟು ಹೋಗಿದ್ದು ಕುಟುಂಬಸ್ಥರ ಕೋಪಕ್ಕೆ ಕಾರಣವಾಗಿದೆ. ಗ್ರಾಮದಲ್ಲಿ ಈ ಹಿಂದೂ-ಮುಸ್ಲಿಂ ಪ್ರೇಮ ಪ್ರಕರಣ ಪ್ರಕ್ಷುಬ್ಧ ವಾತಾವರಣ ಸೃಷ್ಟಿಸಿದೆ. ಪ್ರೀತಿ ಹಾಗೂ ಮದುವೆಗೆ ಮನೆಯವರ ವಿರೋಧದ ಹಿನ್ನೆಲೆ ಇಬ್ಬರು ಮನೆ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಈ ಪ್ರೇಮ ಸಂಬಂಧದಿಂದಾಗಿ ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸಹನಾ ಚಿನಕುರುಳಿ ಗ್ರಾಮದ ಖಾಸಗಿ ವಿದ್ಯಾ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಸಹನಾ ಹಾಗೂ ಮುದಾಸಿರ್‌ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *