ಬೆಂಗಳೂರಿನ ಸುಬ್ರಹ್ಮಣ್ಯಪುರದ ಸರ್ಕಲ್ ಮಾರಮ್ಮಾ ದೇವಸ್ಥಾನದ ಬಳಿ ಅಪ್ರಾಪ್ತ ವಯಸ್ಕ ಮಗಳು ಸ್ನೇಹಿತರೊಂದಿಗೆ ಸೇರಿ ತನ್ನ ತಶಯಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಉಸಿರುಗಟ್ಟಿಸಿ ಕೊಲೆ ಮಾಡಿ ನೇಣು ಹಾಕಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಈ ಕೃತ್ಯದಲ್ಲಿ ಭಾಗಿಯಾದ ಐವರೂ ಅಪ್ರಾಪ್ತ ವಯಸ್ಕರು ಎಂಬುದು ಆತಂಕದ ವಿಚಾರ. ನೇತ್ರಾವತಿ (35) ಕೊಲೆಯಾದವರು.
ನೇತ್ರಾವತಿಗೆ ಸೋದರಿ ಅನಿತಾ ಕರೆ ಮಾಡಿದರೆ ಫೋನ್ ಸ್ವೀಕರಿಸಿಲ್ಲ. ಒಂದು ದಿನವಿಡೀ ಕರೆ ಮಾಡಿದರೂ ಸ್ವೀಕರಿಸದಾಗ ಅನುಮಾನ ಮೂಡಿದೆ. ನೇತ್ರಾವತಿಯ ಮಗಳಿಗೂ ಕರೆ ಮಾಡಿದರೂ ಸ್ವೀಕರಿಸಿಲ್ಲ. ಹೀಗಾಗಿ ಮರುದಿನ ಅನಿತಾ ನೇತ್ರಾವರತಿಯ ಮನೆಯತ್ತ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 25 ರಂದುಕೊಲೆ ನಡೆದಿದ್ದು, ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದರು. ಮೃತ ಮಹಿಳೆಯ ಅಕ್ಕ ಅನಿತಾ ಮಗಳ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು. ತನ್ನ ತಂಗಿಯ ಸಾವಿನ ಬಳಿಕ ಮಗಳು ಎಲ್ಲೂ ಕಾಣುತ್ತಿಲ್ಲ ಎಂದು ಅನಿತಾ ದೂರಿನಲ್ಲಿ ತಿಳಿಸಿದ್ದರು, ಅದಾದ ಎರಡು ದಿನಗಳ ಬಳಿಕ ಮಗಳು ಮನೆಗೆ ವಾಪಸ್ ಬಂದಿದ್ದಳು.
“ನಾನು ಅವತ್ತು ಮನೆಗೆ ಹೋದಾಗ ಐವರು ಸ್ನೇಹಿತರನ್ನು ನೋಡಿದೆ, ಟವಲ್ ನಲ್ಲಿ ಕುತ್ತಿಗೆ ಬಿಗಿದು ನೇಣುಹಾಕಿದ್ದನ್ನು ನೋಡಿದೆ ನಂತರ ನನ್ನನ್ನು ಬೆದರಿಸಲಾಗಿತ್ತು, ಭಯಪಟ್ಟು ಪ್ರೆಂಡ್ ಮನೆಗೆ ತೆರಳಿದ್ದೆ ಎಂದು ಹೇಳಿದ್ದಳು. ಅನಮಾನದಿಂದ ಅನಿತಾ ದೂರು ನೀಡಿದ್ದು, ಪೊಲೀಸ್ ವಿಚಾರಣೆ ವೇಳೆ ಮಗಳೇ ಕೊಲೆ ಮಾಡಿರುವುದು ಬಯಲಾಗಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೇತ್ರಾವತಿಯ ಪುತ್ರಿ ಯವಕನೊಬ್ಬನ್ನು ಪ್ರೀತಿಸುತ್ತಿದ್ದಳು. ಆತ ಪದೇ ಪದೆ ಮನೆಗೆ ಬರುತ್ತಿದ್ದ. ಅ.25 ರಾತ್ರಿ ಪ್ರಿಯಕರ ಜೊತೆಗೆ ಮಗಳು ಮನೆಗೆ ಬಂದಿದ್ದಳು. ಪ್ರಿಯಕರ ಜೊತೆಗೆ ಮೂವರು ಸ್ನೇಹಿತರೂ ಇದ್ದರು. ರಾತ್ರಿ ಮಲಗಿದ್ದ ನೇತ್ರಾವತಿಗೆ ಎಚ್ಚರಗೊಂಡಾಗ ಮನೆಯಲ್ಲಿ ಮಗಳ ಜೊತೆ ನಾಲ್ವರು ಒಂದೇ ಕೋಣೆಯಲ್ಲಿರುವುದು ಗೊತ್ತಾಗಿದೆ. ಹೀಗಾಗಿ ಮಗಳಿಗೆ ಬೈದು ತಕ್ಷಣ ನಾಲ್ವರನ್ನು ಮನೆಯಿಂದ ಹೊರಗೆ ಹೋಗುವಂತೆ ಎಚ್ಚರಿಸಿದ್ದಾರೆ. ಹೋಗದಿದ್ದರೆ ಪೊಲೀಸರಿಗೆ ಕರೆ ಮಾಡುವು ದಾಗಿ ಹೇಳಿದ್ದಾರೆ.
ರಾತ್ರಿ ಪಾರ್ಟಿಗೆ ಅಡ್ಡಿ ಮಾಡಿದ ತಾಯಿ ನೇತ್ರಾವತಿ ವಿರುದ್ದ ಮಗಳು ಪ್ರಿಯಕರ, ಸ್ನೇಹಿತರು ಆಕ್ರೋಶಗೊಂಡಿದ್ದಾರೆ. ನಾಲ್ವರು ನೇತ್ರಾವತಿಯ ಬಾಯಿಯನ್ನು ಬಲವಂತವಾಗಿ ಮುಚ್ಚಿದ್ದಾರೆ. ಟವಲ್‌ನಲ್ಲಿ ಕುತ್ತಿಗೆ ಬಿಗಿದಿದ್ದಾರೆ. ಆಕೆ ಮೃತಪಟ್ಟ ಬಳಿಕ ಬಳಿಕ ಕತ್ತಿಗೆ ಸೀರೆ ಬಿಗಿದು ಫ್ಯಾನ್‌ಗೆ ಕಟ್ಟಿ ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ಬಳಿಕ ನಾಲ್ವರು ಪರಾರಿ ಆಗಿದ್ದಾರೆ.

 


