Menu

ಕೆ-ಶೋರ್ ಯೋಜನೆಗೆ TAMC ಸೇವೆ ಪಡೆಯಲು ರೂ.20.47 ಕೋಟಿ: ಸಚಿವ ಸಂಪುಟ

ಕರ್ನಾಟಕ-ಕರಾವಳಿ ಸ್ಥಿತಿಸ್ಥಾಪಕತ್ವ ಮತ್ತು ಆರ್ಥಿಕತೆಯನ್ನು ಬಲಪಡಿಸುವ Karnataka Strengthening Coastal Resilience and Economy ಕೆ-ಶೋರ್ ಯೋಜನೆಗೆ ತಾಂತ್ರಿಕ ಮತ್ತು ನಿರ್ವಹಣಾ ಸಲಹೆಗಾರರನ್ನು Technical and Management Consultant (TAMC) ಸೇವೆಗಳನ್ನು ಪಡೆಯಲು ರೂ.20.47 ಕೋಟಿ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ  ಪ್ರಮುಖ ನಿರ್ಣಯಗಳನ್ಳುನು ಕೈಗೊಳ್ಳಲಾಗಿದೆ,  ಅವು ಹೀಗಿವೆ,

ದಿನಾಂಕ: 22.11.2024 ರಂದು ಕೆ.ಟಿ.ಪಿ.ಪಿ ಮೂಲಕ TAM ಸೇವೆಗಳನ್ನು ಪಡೆಯಲು Request for Proposal (RFP) ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ ನೀಡುವುದು; ಒಪ್ಪಂದ ಪ್ರಕ್ರಿಯೆ ಪೂರ್ಣಗೊಳಿಸಲು ಮತ್ತು ಆಯ್ಕೆಯಾದ ಬಿಡ್ಡುದಾರ ರೊಂದಿಗೆ ಒಪ್ಪಂದಕ್ಕೆ ಸಹಿ Karnataka Eco Restoration Society (KERS) ಗೆ ಅಧಿಕಾರ ನೀಡುವುದು; ವಿಶ್ವಬ್ಯಾಂಕ್ ಜೊತೆ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಲು  ನಿರ್ಧಾರ.

ಸರ್ಕಾರಿ ಶಾಲೆಗಳಲ್ಲಿ 2200 ಶಾಲಾ ಕೊಠಡಿಗಳನ್ನು 360 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲು ಸಚಿವ ಸಂಪುಟ ಅನುಮೋದನೆ.

2025-26ನೇ ಆರ್ಥಿಕ ವರ್ಷದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ, ವಲಯ ಮಟ್ಟದಲ್ಲಿ ಟೆಂಡರ್ ಕರೆಯಲು ಅವಕಾಶ ನೀಡುವುದು ಮತ್ತು ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯ ಯೋಜನಾ ರಸ್ತೆ ಆಸ್ತಿ ನಿರ್ವಹಣಾ ಕೇಂದ್ರ (PRAMC) ಗೆ ವಹಿಸಿ, ಕೇಂದ್ರೀಕೃತ ಟೆಂಡರ್ ಕರೆಯಲು ಅವಕಾಶ ನೀಡುವುದು. ಜಿಲ್ಲಾ ಮಟ್ಟದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಉಪ ನಿರ್ದೇಶಕರು (ಆಡಳಿತ) ಇವರು ಕಾಮಗಾರಿಗಳ ಮೇಲ್ವಿಚಾರಣೆ ನಡೆಸುತ್ತಾರೆ; ಸಚಿವ ಸಂಪುಟ ನಿರ್ಣಯ.

ರಾಜ್ಯದ ಕಡಲ ತೀರಗಳ ಅಭಿವೃದ್ಧಿಗೆ ಕ್ರಮ

 

ಕರಾವಳಿಯ ಪ್ರಸ್ತಾವಿತ ಯೋಜನೆಗಳಾಗಿರುವ ರಾಜ್ಯದ ನಾಲ್ಕು ಹಾಲಿ (existing) ಬಂದರುಗಳಾದ (1) ಕಾರವಾರ (2) ಹಳೇ ಮಂಗಳುರು (ಬೇಂಗ್ರೆ ಬದಿ) (3) ಹಳೇ ಮಂಗಳೂರು (ನಗರ ಬದಿಯ) ಮತ್ತು (4) ಮಲ್ಪೆಯ ಬರ್ತ್ಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ರಿಪೇರಿ- ಕಾರ್ಯಾಚರಣೆ-ನಿರ್ವಹಣೆ-ವರ್ಗಾವಣೆ (ROMT) ಆಧಾರದಲ್ಲಿ ಅಭಿವೃದ್ಧಿಪಡಿಸಿ, ನಿರ್ವಹಿಸುವ ಗುರಿಯನ್ನು ಹೊಂದಿದ್ದು, ಇದು ಖಾಸಗಿ ಪಾಲುದಾರಿಕೆಯೊಡನೆ ಕರಾವಳಿಯ ಆಯ್ದ ಹಾಲಿ ಬಂದರುಗಳ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಗಮನಾರ್ಹವಾಗಿ ಹೆಚ್ಚಿವುದರೊಂದಿಗೆ, ಕರ್ನಾಟಕ ಜಲಸಾರಿಗೆ ಮಂಡಳಿಯ ವಾರ್ಷಿಕ ಆದಾಯದ ಹೆಚ್ಚಳ, ಸ್ಥಳೀಯ ಉದ್ಯೋಗದ ಹೆಚ್ಚಳ ಮತ್ತು ಸುಧಾರಿತ ಜೀವನೋಪಾಯಕ್ಕೆ ಅವಕಾಶ ನೀಡುವ ಮೂಲಕ ಈ ಯೋಜನೆಗಳು ಅಭಿವೃದ್ಧಿಯನ್ನು ಉತ್ತೇಜಿಸುವುದರಿಂದ ಸದರಿ ಯೋಜನೆಯನ್ನು ಸಚಿವ ಸಂಪುಟ ಅನುಮೋದನೆ.

 ಬನಶಂಕರಿಯಲ್ಲಿ ವೆಂಕಟರಮಣಸ್ವಾಮಿ ದೇವಸ್ಥಾನಕ್ಕೆ ನಿವೇಶನ

 

ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ ಟ್ರಸ್ಟ್ನವರು ಸುಮಾರು 60 ವರ್ಷಗಳಿಂದ ದೇವಸ್ಥಾನ ನಿರ್ಮಿಸಿ ಪೂಜಾ ಕಾರ್ಯವನ್ನು ನಡೆಸುತ್ತಿದ್ದಾರೆ. ಪ್ರಶ್ನಿತ ನಿವೇಶನವನ್ನು ಸಿ.ಎ ನಿವೇಶನವನ್ನಾಗಿ ವಿಂಗಡಿಸಿ ಬಡಾವಣೆ ನಕ್ಷೆಯಲ್ಲಿ ಈಗಾಗಲೇ ಅಳವಡಿಸಿಕೊಳ್ಳಲಾಗಿರುತ್ತದೆ. ಮುಂದುವರೆದು, ಚಾಲ್ತಿಯಲ್ಲಿರುವ ಸಿ.ಎ ನಿವೇಶನ ಹಂಚಿಕೆ ದರವನ್ನು ವಿಧಿಸಿ ಟ್ರಸ್ಟ್ಗೆ ಹಂಚಿಕೆ ಮಾಡಲು ಪ್ರಸ್ತಾಪಿಸಿರುವುದರಿಂದ, ವಿಶೇಷ ಪ್ರಕರಣವೆಂದು ಪರಿಗಣಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ) ನಿಯಮಾವಳಿಗಳು, 1989ನ್ನು ಸಡಿಲಿಸಿ, ಬನಶಂಕರಿ 1ನೇ ಹಂತ, 1ನೇ ಬ್ಲಾಕ್, ನಿವೇಶನ ಸಂಖ್ಯೆ: 181ಕ್ಕೆ ಹೊಂದಿಕೊಂಡಂತಿರುವ ಸಿ.ಎ. ನಿವೇಶನವಾಗಿ ಬಡಾವಣೆ ನಕ್ಷೆಯಲ್ಲಿ ಗುರುತಿಸಿರುವ (13.72+17.68) / 2*38.4 =602.88 ಚ.ಮೀ ಅಳತೆಯ ನಿವೇಶನವನ್ನು ಚಾಲ್ತಿಯಲ್ಲಿರುವ ಸಿ.ಎ ನಿವೇಶನ ಹಂಚಿಕೆ ದರವನ್ನು ವಿಧಿಸಿ, ದೇವಸ್ಥಾನದ ಉದ್ದೇಶಕ್ಕಾಗಿ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ ಟ್ರಸ್ಟ್ ರವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲು ಅನುಮತಿ ನೀಡಲು ಸಚಿವ ಸಂಪುಟ ನಿರ್ಧಾರ.

ಮಂಡ್ಯ ಜಿಲ್ಲಾ, ಕಾಂಗ್ರೆಸ್ ಭವನದ ಕಟ್ಟಡದ ನಿರ್ಮಾಣ ಮಾಡುವ ಉದ್ದೇಶಕ್ಕಾಗಿ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ವಿವೇಕಾನಂದ ಬಡಾವಣೆಯಲ್ಲಿರುವ ನಾಗರಿಕ ಸೌಲಭ್ಯ ನಿವೇಶನ ಸಂಖ್ಯೆ: 1/ಬಿ ರಲ್ಲಿ 1457.8 ಚ.ಮೀ ವಿಸ್ತೀರ್ಣದ ನಿವೇಶನವನ್ನು ಮಂಜೂರು.  ಕೋಲಾರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳು ಮತ್ತು ಕೋಲಾರ APMC ಯಿಂದ ಹಾಗೂ ಬಿಬಿಎಂಪಿಯಿಂದ ಪ್ರತಿದಿನ ಒಟ್ಟಾರೆ 150 ಟನ್‌ಗಳಷ್ಟು ಹಸಿತ್ಯಾಜ್ಯವನ್ನು Compressed Bio Gas (CBG)) ಘಟಕಗಳ ಮೂಲಕ ಸಂಸ್ಕರಿಸಲು ಕೋಲಾರ ನಗರಸಭೆಗೆ ಸೇರಿದ ವಕ್ಕಲೇರಿ ಹೋಬಳಿ, ಅರಾಭಿಕೊತ್ತನೂರು ಗ್ರಾಮದ ಸರ್ವೆ ನಂ.152ರಲ್ಲಿ 9 ಎಕರೆ 38 ಗುಂಟೆ ಜಮೀನನ್ನು ಕೇವಲ ಸೀಮಿತ ಬಳಕೆಗಾಗಿ ಮಾತ್ರ (Permissive Use)) 25 ವರ್ಷಗಳ ಅವಧಿಗೆ Nominal Lease Rate ಆಧಾರದ ಮೇಲೆ Gas Authority of India Limited (GAIL) ಸಂಸ್ಥೆಗೆ ವಹಿಸಿಕೊಡಲು ನಿರ್ಣಯ.

ಯಾದಗಿರಿ ಜಿಲ್ಲೆ ಶಹಾಪುರ ನಗರಸಭೆ ವ್ಯಾಪ್ತಿಯ IDSMT ಲೇಔಟ್‌ನಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಟ್ಟ 300.14 ಚದರ ಮೀಟರ್ ಅಳತೆಯ ನಿವೇಶನ ಸಂಖ್ಯೆ: 85ನ್ನು ಕರ್ನಾಟಕ ಪ್ರದೇಶ ಕುರುಬರ ಸಂಘ, ಶಹಾಪೂರ ಇವರಿಗೆ ಕನಕ ಭವನ ನಿರ್ಮಾಣಕ್ಕಾಗಿ ಉಚಿತವಾಗಿ ಮಂಜೂರು ಮಾಡಲು ನಿಧಾರ.

ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವೆ ಫಾರ್ಮ್ನಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಥಮಿಕ ಹಂತಕ್ಕಾಗಿ ರೂ.23.25 ಕೋಟಿಗಳ ಅಂದಾಜು ಮೊತ್ತದಲ್ಲಿ ಹೊಸ ಮೂಲಸೌಕರ್ಯ ಅಭಿವೃದ್ಧಿ, ದುರಸ್ಥಿ ಮತ್ತು ನವೀಕರಣ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.

ಕಾರವಾರ ಕ್ಯಾನ್ಸರ್ ಕೇರ್ ಘಟಕಕ್ಕೆ ಉಪಕರಣ

 

ಕಾರವಾರ ಕ್ಯಾನ್ಸರ್ ಕೇರ್ ಘಟಕದ ಸ್ಥಾಪನೆಗೆ ಅಗತ್ಯವಿರುವ ಹೆಚ್ಚುವರಿ ಉಪಕರಣಗಳಿಗೆ ತಗಲುವ ಅನುದಾನವನ್ನು ಈಗಾಗಲೇ ಅನುಮೋದನೆಯಾಗಿರುವ ರೂ.1825.00 ಲಕ್ಷಗಳ ಅನುದಾನದಲ್ಲಿ ಸರ್ಕಾರದ ವತಿಯಿಂದ ಭರಿಸುವುದು ಇನ್ನುಳಿದ ಮೊತ್ತ ರೂ.1338.96 ಲಕ್ಷಗಳ ಅನುದಾನವನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿAದ ಭರಿಸಲು ಅನುಮೋದನೆ ನೀಡಲು ನಿರ್ಧಾರ.

ಕಾರವಾರ ವೈದ್ಯಕೀಯ ಕಾಲೇಜು ಆವರಣದಲ್ಲಿ ಕ್ಯಾನ್ಸರ್ ಕೇರ್ ಘಟಕದ ಸ್ಥಾಪನೆಗೆ ಅಗತ್ಯವಿರುವ ಉಪಕರಣಗಳ ಖರೀದಿ ಮತ್ತು ನಿರ್ಮಾಣ ಕಾಮಗಾರಿಗಳನ್ನು ಒಟ್ಟು ರೂ.31.63 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆಗೆ ಪ್ರಸ್ತಾಪಿಸಲಾಗಿತ್ತು. ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಟರ್ಷಿಯರಿ ಕ್ಯಾನ್ಸರ್ ಕೇಂದ್ರ ಸ್ಥಾಪಿಸಲು ಮೊದಲನೇ ಹಂತದಲ್ಲಿ ಹೆಚ್ಚುವರಿ ಉಪಕರಣಗಳನ್ನು ಟೆಂಡರ್ ಮೂಲಕ ಖರೀದಿಸಲಾಗುತ್ತಿರುವ ರೂ.2660.96 ಲಕ್ಷಗಳು ಮತ್ತು ಎರಡನೇ ಹಂತದಲ್ಲಿ ಕಾಮಗಾರಿ ಮತ್ತು ಉಪಕರಣ ಖರೀದಿಸಲು ಕೈಗೊಳ್ಳಲು ರೂ.503.00 ಲಕ್ಷಗಳು ಒಟ್ಟಾರೆ ರೂ.3163.96 ಲಕ್ಷಗಳ ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆಗೆ ನಿರ್ಧಾರ.

ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಕೇರ್ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಮೊದಲನೇ ಹಂತದ ಉಪಕರಣಗಳು, ಸಿಎಸ್‌ಎಸ್‌ಡಿ ಉಪಕರಣಗಳು ಮತ್ತು ಪೀಠೋಪಕರಣಗಳಿಗೆ ಒಟ್ಟಾರೆ ರೂ.50.00 ಕೋಟಿಗಳ ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ.

ಕೆಎಸ್‌ಆರ್‌ಪಿ & ಐಆರ್‌ಬಿ ವೃಂದ ಮತ್ತು ನೇಮಕಾತಿಗಳಿಗೆ ಅನುಮೋದನೆ

 

ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಮತ್ತು ಭಾರತೀಯ ಮೀಸಲು ಪಡೆಯ (ಐಆರ್‌ಬಿ) ಕರಡು ವೃಂದ ಮತ್ತು ನೇಮಕಾತಿ ನಿಯಮಗಳನ್ನು ಆಕ್ಷೇಪಣೆಗಳನ್ನು ಆಹ್ವಾನಿಸಿ ಪ್ರಕಟಿಸಲು; ಮತ್ತು ಕರಡು ನಿಯಮಗಳಿಗೆ ಸ್ವೀಕೃತವಾಗುವ ಆಕ್ಷೇಪಣೆಗಳು ಗುರುತರವಾಗಿಲ್ಲದಿದ್ದಲ್ಲಿ, ಮತ್ತೊಮ್ಮೆ ಸಚಿವ ಸಂಪುಟದ ಅನುಮೋದನೆ ಪಡೆಯದೇ ಅಂತಿಮಗೊಳಿಸಿ ಪ್ರಕಟಿಸಲು ನಿರ್ಧಾರ.

2025-26ನೇ ಸಾಲಿನ ಆಯವ್ಯಯ ಘೋಷಣೆಯ ಕಂಡಿಕೆ-432 ರನ್ವಯ ತಂತ್ರಾಂಶ ಅಭಿವೃದ್ಧಿ, ವರ್ಧನೆ, ನಿರ್ವಹಣೆ ಹಾಗೂ ತಾಂತ್ರಿಕ ಸಹಾಯಕ್ಕಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ “ಕಾವೇರಿ ಐಟಿ ಸೆಲ್” ಹೆಸರಿನ ಇನ್-ಹೌಸ್ ತಾಂತ್ರಿಕ ಅಭಿವೃದ್ಧಿ ವಿಭಾಗವನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ ಹಾಗೂ ನಿಯಮಗಳ ಪ್ರಕಾರ ಮಾನವ ಸಂಪನ್ಮೂಲ ಸಂಸ್ಥೆಯಿಂದ ಹೊರಗುತ್ತಿಗೆಯ ಮೂಲಕ ಕಂಡಿಕೆ-3ರ ಕೋಷ್ಠಕದ ಪ್ರಕಾರ 5 ವರ್ಷದ ಅವಧಿಗೆ ರೂ.69.13 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ.

1545.23 ಕೋಟಿ ನಷ್ಟ – ಆರ್ಥಿಕ ಸಹಾಯಕ್ಕೆ ಎನ್.ಡಿ.ಆರ್.ಎಫ್.ಗೆ ಮನವಿ

 

2025ರ ನೈಋತ್ಯ ಮುಂಗಾರು ಅವಧಿಯಲ್ಲಿ ಭಾರೀ ಮಳೆ ಮತ್ತು ನದಿ ಪ್ರವಾಹದಿಂದ ಹಾನಿಗೊಳಗಾದ ಮೂಲಸೌಕರ್ಯಗಳ ಪುನನಿರ್ಮಾಣ ವನ್ನು ಕೈಗೊಳ್ಳಲು NDRF ನ ಚೇತರಿಕೆ ಮತ್ತು ಪುನನಿರ್ಮಾಣ ವಿಂಡೋದ ಅಡಿಯಲ್ಲಿ (PDNA)) ಅನುಬಂಧದಲ್ಲಿ ಇರುವಂತೆ ಜಿಲ್ಲಾ ಮತ್ತು ವಲಯವಾರು ಹಾನಿ ಮೌಲ್ಯಮಾಪನದ ವಿವರಗಳೊಂದಿಗೆ ಸುಮಾರು ರೂ.1545.23 ಕೋಟಿಗಳ ಆರ್ಥಿಕ ಸಹಾಯವನ್ನು ಕೋರಲು ಭಾರತ ಸರ್ಕಾರಕ್ಕೆ Memorandum ಸಲ್ಲಿಸಲು; ಹಾಗೂ ಭಾರತ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಖ&ಖ ನಿಧಿಗಳನ್ನು ಅನುಮೋದಿಸಿದ ನಂತರ, ಆರ್ಥಿಕ ಪರಿಣಾಮಗಳ ಪ್ಯರ‍್ಯಾಗ್ರಾಫ್‌ನಲ್ಲಿ ನಿರ್ದಿಷ್ಟಪಡಿಸಿದ ವೆಚ್ಚ ಹಂಚಿಕೆ ಮಾದರಿಗೆ ಅನುಗುಣವಾಗಿ ರಾಜ್ಯ ನಿಧಿಯಿಂದ ಖ&ಖ ವೆಚ್ಚವನ್ನು ಹಂಚಿಕೊಳ್ಳಲು ಸಚಿವ ಸಂಪುಟ ನಿರ್ಣಯ.

ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಆಯ್ಕೆಯಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಕೊಳವೆಬಾವಿಗಳನ್ನು ಕೊರೆಯಲು ಮತ್ತು ಪಂಪ್ ಸೆಟ್‌ಗಳನ್ನು ಸರಬರಾಜು ಮಾಡಲು 2022-23ನೇ ಸಾಲಿನಲ್ಲಿ Empanel ಮಾಡಿಕೊಂಡಿರುವ ಗುತ್ತಿಗೆದಾರರ ಅವಧಿಯನ್ನು ಮುಂದಿನ ಎರಡು ವರ್ಷಗಳಿಗೆ (2024-25 ಮತ್ತು 2025-26 ಸಾಲಿನ ಗುರಿಗಳಿಗೆ) ಸೀಮಿತಗೊಳಿಸಿ, 2027ನೇ ಜೂನ್ ತಿಂಗಳವರೆಗೆ ವಿಸ್ತರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು; ಗಂಗಾಕಲ್ಯಾಣ ಯೋಜನೆ ಮತ್ತು ಇತರ ಸ್ವಯಂ ಉದ್ಯೋಗ ಯೋಜನೆಗಳಡಿ ಫಲಾನುಭವಿಗಳನ್ನು ಆಯಾ ವರ್ಷದ ಅಕ್ಟೋಬರ್ 31ನೇ ತಾರೀಖಿನೊಳಗೆ ಸಂಬAಧಪಟ್ಟ ಆಯಾ ಕ್ಷೇತ್ರದ ಮಾನ್ಯ ಶಾಸಕರುಗಳು ಆಯ್ಕೆ ಮಾಡದೇ ಇದ್ದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯಾ ಜಿಲ್ಲಾ ಮಾನ್ಯ ಉಸ್ತುವಾರಿ ಸಚಿವರಿಗೆ ವಹಿಸಲು (2025-26ನೇ ಸಾಲಿನ ಗುರಿಗಳನ್ನು ಹೊರತುಪಡಿಸಿ) ನಿರ್ಣಯ.

2025-26ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ 241 ವಿವಿಧ ಮಾದರಿಯ ವಾಹನಗಳನ್ನು ರೂ.34.95 ಕೋಟಿಗಳ ಅಂದಾಜು ಮೊತ್ತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಗ್ರೇಟರ್ ಬೆಂಗಳೂರು ಕ್ರಿಯಾ ಯೋಜನೆಗೆ ಅನುಮೋದನೆ

 

ಮಾನ್ಯ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಅನುದಾನದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 05 ಬೆಂಗಳೂರು ನಗರ ಪಾಲಿಕೆಗಳ ವ್ಯಾಪ್ತಿಯ ವಾರ್ಡ್ ಅಭಿವೃದ್ಧಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ರೂ.1055.00 ಕೋಟಿಗಳ ಮೊತ್ತದಲ್ಲಿ ಕೈಗೊಳ್ಳುವ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆಗೆ ಅನುಮೋದನೆ.

ವಿಶೇಷ ಮೂಲಭೂತ ಸೌಕರ್ಯಕ್ಕೆ ಬಂಡವಾಳ ಬೆಂಬಲ ಯೋಜನೆ ಅಡಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ 05 ಬೆಂಗಳೂರು ನಗರ ಪಾಲಿಕೆಗಳಲ್ಲಿನ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಡಾಂಬರಿಕರಣ ಕಾಮಗಾರಿಗಳನ್ನು ರೂ.1241.57 ಕೋಟಿಗಳ ಅಂದಾಜು ಮೊತ್ತದಲ್ಲಿ ಕೈಗೊಳ್ಳುವ ಕ್ರಿಯಾ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಕರ್ನಾಟಕ ಸ್ಟಾರ್ಟ್ಅಪ್ ಪಾಲಿಸಿ 2022-27ರ ಅಡಿಯಲ್ಲಿ ಐದು ವರ್ಷಗಳ ಅವಧಿಗೆ ರೂ.80.00 ಕೋಟಿಗಳ ಹಂಚಿಕೆಯೊAದಿಗೆ (ಪ್ರತಿ ಟಿಬಿಐಗೆ ರೂ.10.00 ಕೋಟಿ) ಎಂಟು (08) ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯೂಬೇಟರ್ಸ್ (TBIs) 2.0 ಗಳನ್ನು ಸ್ಥಾಪನೆ, ಮೈಸೂರು, ಬಾಗಲಕೋಟೆ, ಶಿವಮೊಗ್ಗ, ಮಂಗಳೂರು, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ.

ಬೆಂಗಳೂರು ನಗರದ ಸಮಗ್ರ ಘನತ್ಯಾಜ್ಯ ನಿರ್ವಹಣೆ (ISWM)) ಮೆ|| ಟರ‍್ರಾ ಫರ್ಮ ಬಯೋಟೆಕ್ನಾಲಜೀಸ್ ಸಂಸ್ಥೆಯವರಿಗೆ ಪ್ರತಿ ಎಕರೆ ಜಮೀನಿಗೆ ರೂ.1.50 ಕೋಟಿಗಳ ಭೂ ಪರಿಹಾರ ನಿಗದಿ, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಬಗ್ಗೆ ಚರ್ಚೆ.  ಒಳಮೀಸಲಾತಿ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ ಸಮಾಜ ಕಲ್ಯಾಣ ಸಚಿªರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಕಾರ್ಯದರ್ಶಿಗಳು ಸೇರಿದಂತೆ ಚರ್ಚೆ ನಡೆಸಿ, ಮಸೂದೆ ರೂಪಿಸಲು ಸಾಧ್ಯವಾದರೆ ಸಂಪುಟ ಸಭೆಯಲ್ಲಿ ಮಂಡಿಸಲು ಸೂಚಿಸಲಾಗಿತ್ತು.  ಈ ಬಗ್ಗೆ ಚರ್ಚೆ ನಡೆದಿಲ್ಲ . ಬೆಳಗಾವಿ ಅಧಿವೇಶನದ ದಿನಾಂಕವನ್ನು ಸಭೆಯಲ್ಲಿ ನಿಗದಿ ಮಾಡಲಾಗಿಲ್ಲ .

ಸಾರ್ವಜನಿಕ ಸ್ಥಳಗಳಲ್ಲಿ ಸಂಘ ಸಂಸ್ಥೆಗಳು ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿ ಹೊರಡಿಸಿರುವ ಆದೇಶಕ್ಕೆ ಸರ್ವೋಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿರುವ ಬಗ್ಗೆ ಮಾತನಾಡಿ ತಡೆಯಾಜ್ಞೆಯನ್ನು ತೆರವುಗೊಳಿಸಲು ಮೇಲ್ಮನವಿ ಸಲ್ಲಿಸಲಾಗುವುದು ಎಂದು ಸರ್ಕಾರ ಈಗಾಗಲೇ ಘೋಷಿಸಿದೆ,

 

 

Related Posts

Leave a Reply

Your email address will not be published. Required fields are marked *