Thursday, October 30, 2025
Menu

ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ಮತ್ತು ಮುಸ್ಲಿಂ ತುಷ್ಟೀಕರಣ: ಕೆಎನ್‌ ರಾಜಣ್ಣ ಸತ್ಯ ಹೇಳಿದ್ದಾರೆಂದ ಆರ್‌ ಅಶೋಕ

@RahulGandhi ಅವರ “ಮತಗಳ್ಳತನ”ದ ನಾಟಕ, ಸುಳ್ಳನ್ನು ಬಯಲು ಮಾಡಿದ ಮಾಜಿ ಸಚಿವ ಕೆ.ಎನ್.ರಾಜಣ್ಣನವರು ಅವರು ಈಗ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣ, ಮುಸ್ಲಿಂ ತುಷ್ಟೀಕರಣದ ಬಗ್ಗೆ ಮತ್ತೊಮ್ಮೆ ಸತ್ಯವನ್ನು ನುಡಿದಿದ್ದಾರೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ.

ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಯಾಕೆ ಓಟು ಹಾಕುತ್ತಾರೆ,  ಬಿಜೆಪಿಯನ್ನು ಸೋಲಿಸಲು ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುತ್ತಾರೆಯೇ ಹೊರತು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲು ಓಟು ಹಾಕೋದಿಲ್ಲ.  ಮುಸ್ಲಿಮರಿಗೆ ಬೇರೆ ಆಯ್ಕೆ ಇಲ್ಲ, ಅದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಓಟು ಹಾಕುತ್ತಾರೆ ಎಂದು ರಾಜಣ್ಣ ಹೇಳಿರುವುದಕ್ಕೆ ಅಶೋಕ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ ಖಾತೆಯಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಸತ್ಯವಂತಿಕೆಗೆ ಸಚಿವ ಸ್ಥಾನವನ್ನೇ ಕಳೆದುಕೊಳ್ಳುವಂತಹ ದೊಡ್ಡ ಬೆಲೆ ತೆತ್ತಬೇಕಾದ ಪರಿಸ್ಥಿತಿ ಬಂದರೂ ಸಹ ಯಾವುದೇ ಮುಲಾಜಿಲ್ಲದೆ ಸತ್ಯವನ್ನೇ ಹೇಳುವ ನಿಮ್ಮ ನಿಷ್ಠುರತೆ ನಿಜಕ್ಕೂ ಅಭಿನಂದನೀಯ @KNRajanna_Off ಅವರೇ. ಆದರೆ ನಿಮ್ಮಂತಹವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಸ್ಥಾನವೂ ಇಲ್ಲ, ಬೆಲೆಯೂ ಇಲ್ಲ. ಹೈಕಮಾಂಡ್ ಗುಲಾಮರಿಗೆ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಉಳಿಗಾಲ, ಸ್ಥಾನಮಾನ. ಇದು ಕರ್ನಾಟಕದ, ನಮ್ಮ ದೇಶದ ರಾಜಕಾರಣದ ಅತ್ಯಂತ ದೊಡ್ಡ ದುರಂತ ಎಂದು ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *