Thursday, October 30, 2025
Menu

ಬಿಗ್‌ ಬಾಸ್‌: ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಪೊಲೀಸ್‌ ನೋಟಿಸ್‌

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದಲ್ಲಿ ಸ್ಪರ್ಧಿ ಅಶ್ವಿನಿ ಗೌಡ ಮತ್ತೊಬ್ಬರು ಸ್ಪರ್ಧಿ ರಕ್ಷಿತಾ ಅವರನ್ನು ಕುರಿತು ‘ಎಸ್ ಕ್ಯಾಟಗರಿ’ ಎಂಬ ಪದವನ್ನು ಬಳಸಿದ್ದಕ್ಕಾಗಿ ಅಶ್ವಿನಿ ವಿರುದ್ಧ ಪೊಲೀಸರು ನೋಟೀಸ್ ನೀಡಿದ್ದಾರೆ.‌

ಅಶ್ವಿನಿ ಈ ಪದ ಬಳಸಿರುವುದನ್ನು ಖಂಡಿಸಿ ವಕೀಲರೊಬ್ಬರು ಬಿಡದಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅಶ್ವಿನಿ ‘ಎಸ್ ಕ್ಯಾಟಗರಿ’ ಪದವನ್ನು ಬಳಸಿದ್ದು ಜಾತಿ ನಿಂದನೆ ಅಥವಾ ವ್ಯಕ್ತಿ ನಿಂದನೆಗೆ ಸಮವೆಂದು ದೂರಿನಲ್ಲಿ ಆರೋಪಸಲಾಗಿತ್ತು. ಈ ದೂರಿನ ಅನ್ವಯ, ಬಿಡದಿ ಪೊಲೀಸರು ಎನ್‌ಸಿಆರ್ ದಾಖಲಿಸಿ ತನಿಖೆ ಆರಂಭಿಸಿ ಆರೋಪಿಗಳಿಗೆ ನೋಟೀಸ್ ನೀಡಲಾಗಿದೆ.

ಸ್ಪರ್ಧಿ ಅಶ್ವಿನಿ ಗೌಡ್, ಕಲರ್ಸ್ ಚಾನೆಲ್‌ನ ಬಿಸಿನೆಸ್ ಹೆಡ್ ಪ್ರಶಾಂತ್ ನಾಯಕ್, ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಶೋ ಡೈರೆಕ್ಟರ್ ಪ್ರಕಾಶ್ ಅವರ ವಿರುಧವೂ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಎಲ್ಲಾ ಆರೋಪಿಗಳಿಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಕೋರಿದ್ದಾರೆ.

ಬಿಗ್ ಬಾಸ್ ಶೋ ಶೂಟಿಂಗ್ ಸ್ಥಳದಲ್ಲೇ ನಡೆಯುತ್ತಿರುವ ಹಿನ್ನೆಲೆ ಬಿಗ್ ಬಾಸ್ ತಂಡದ ಮನವಿಯಂತೆ ಪೊಲೀಸರೇ ಶೂಟಿಂಗ್ ಸ್ಟೂಡಿಯೋಗೆ ತೆರಳಿ ಹೇಳಿಕೆ ದಾಖಲಿಸಿಕೊಳ್ಳಲು ಮಾಡಿಕೊಲ್ಳುವ ಸಾಧ್ಯತೆ ಇದೆ, ಅಶ್ವನಿ ಶೋ ಒಳಗೆ ಇರುವಾಗಲೇ ಪೊಲೀಸರು ತನಿಖೆ ನಡೆಸಬಹುದಾಗಿದೆ.

ಅಶ್ವನಿ ಗೌಡ ರಕ್ಷಿತಾ ಅವರಿಗೆ ಎಸ್‌ ಕ್ಯಾಟಗರಿ ಎಂದು ಅವಮಾನಿಸಿರುವುದಕ್ಕೆ ಸಾಮಾಜಿಕ ಜಾಲತಾನಗಳಲ್ಲಿ ವ್ಯಾಪಕ ಠೀಕೆ ವ್ಯಕ್ತವಾಗಿದ್ದು, ಎಲ್ಲರೂ ರಕ್ಷಿತಾ ಪರವಾಗಿ ಕಾಮೆಂಟ್‌ ಂಆಡಿ ಗಮನ ಸೆಳೆದಿದ್ದರು. ಅದಾದ ಬಳಿಕ ವಾರದ ಕೊನೆಯಲ್ಲಿ ಸುದೀಪ್‌ ಅಶ್ವಿನಿ ಅವರಿಗೆ ಬುದ್ಧಿ ಹೇಳುವ ಜೊತೆಗೆ ಎಚ್ಚರಿಕೆ ಕೂಡ ನೀಡಿದ್ದರು.

Related Posts

Leave a Reply

Your email address will not be published. Required fields are marked *