Menu

ವಿಜಯಪುರದಲ್ಲಿ ಬಾಗಪ್ಪ ಶಿಷ್ಯನ ಹತ್ಯೆ ಆರೋಪಿಗಳ ಕಾಲಿಗೆ ಫೈರಿಂಗ್

ವಿಜಯಪುರದಲ್ಲಿ ಹಂತಕ ಬಾಗಪ್ಪನ ಹಳೆ ಶಿಷ್ಯ ಸುಶೀಲ್ ಕಾಳೆ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ತಡರಾತ್ರಿ ಸುಶೀಲ್ ಕಾಳೆ ಹಂತಕರಿಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದಾಗ ಗಾಂಧಿ ಚೌಕ ಸಿಪಿಐ ಪ್ರದೀಪ್ ತಳಕೇರಿ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಆರೋಪಿ ಆಕಾಶ ಕಲ್ಲವ್ವಗೋಳ, ಸುದೀಪ್ ಅಲಿಯಾಸ್ ಸುಭಾಷ ಬಗಲಿ ಕಾಲಿಗೆ ಗುಂಡು ತಾಗಿದೆ.

ಆಕಾಶ ಮೇಲೆ ಈಗಾಗಲೇ 7 ಪ್ರಕರಣಗಳಿವೆ. ಸೋಮವಾರ ಹಾಡುಹಗಲು ಸುಶೀಲ್ ಕಾಳೆಯ ಭೀಕರ ಹತ್ಯೆ ನಡೆದಿತ್ತು. ಸುಶೀಲ್ ಕಾಳೆ ಬೆನ್ನಿಗೆ ಆರೋಪಿಗಳು ಗುಂಡು ಹಾರಿಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸುಶೀಲ್‌ ಕಾಳೆ ನಗರದ ಬಿಎಲ್ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇಂಡಿ ಪಟ್ಟಣಕ್ಕೆ ಸಿಎಂ ಬಂದಿದ್ದ ವೇಳೆ ಪೊಲೀಸರು ಬಂದೋಬಸ್ತ್ ಕೆಲಸದಲ್ಲಿ ನಿರತರಾಗಿದ್ದಾಗ ಎಸ್ ಎಸ್ ರಸ್ತೆಯ ಎಸ್ ಎಸ್ ಕಾಂಪ್ಲೆಕ್ಸ್ ನಲ್ಲಿ ಇರುವ ಅಮರ ವರ್ಷಿಣಿ ಸಹಕಾರಿ ಬ್ಯಾಂಕ್‌ನಲ್ಲಿ ಈ ಕೃತ್ಯ ನಡೆದಿದೆ.

Related Posts

Leave a Reply

Your email address will not be published. Required fields are marked *