Menu

ಲಡಾಖ್, ಹರಿಯಾಣ, ಗೋವಾಗೆ ರಾಜ್ಯಪಾಲರ ನೇಮಕ

governer appoinet

ನವದೆಹಲಿ: ಲಡಾಖ್‌ಗೆ ಹೊಸ ಲೆಫ್ಟಿನೆಂಟ್ ಗವರ್ನರ್, ಹರಿಯಾಣ ಮತ್ತು ಗೋವಾ ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ರಾಷ್ಟ್ರಪತಿ ಆದೇಶ ಹೊರಡಿಸಿದ್ದಾರೆ.

ಹರಿಯಾಣದ ನೂತನ ರಾಜ್ಯಪಾಲರಾಗಿ ಪ್ರೊ.ಅಶೀಮ್‌ ಕುಮಾರ್ ಘೋಷ್ ಹಾಗೂ ಗೋವಾ ರಾಜ್ಯಪಾಲರಾಗಿ ಪಶುಪತಿ ಅಶೋಕ್ ಗಜಪತಿ ರಾಜು ಅವರನ್ನು ರಾಷ್ಟ್ರಪತಿಗಳು ನೇಮಕ ಮಾಡಿದ್ದಾರೆ.

ಲಡಾಖ್ ಲೆಫ್ಟಿನೆಂಟ್ ಗವರ್ನರ್ ಆಗಿ ಕವಿಂದರ್ ಗುಪ್ತಾ ಅವರನ್ನು ನೇಮಕ ಮಾಡಲಾಗಿದ್ದು, ಈ ಮೂವರು ಅಧಿಕಾರ ವಹಿಸಿಕೊಳ್ಳುವ ದಿನಾಂಕಗಳಿಂದ ಅವರ ಅಧಿಕಾರಾವಧಿ ಜಾರಿಗೆ ಬರಲಿದೆ.

ಜಮ್ಮು ಕಾಶ್ಮೀರದ ಲಡಾಖ್ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ನಿವೃತ್ತ ಬ್ರಿಗೇಡಿಯರ್ ಬಿ.ಡಿ.ಮಿಶ್ರಾ ನೀಡಿದ್ದ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಸೋಮವಾರ ಅಂಗೀಕರಿಸಿದ್ದಾರೆ.

Related Posts

Leave a Reply

Your email address will not be published. Required fields are marked *