ಬೆಂಗಳೂರು ನಗರದಲ್ಲಿ ಆಟೋಗಳ ಹಿಂದೆ ಬಣ್ಣ ಬಣ್ಣದ ಜಾಹೀರಾತು ಪ್ರದರ್ಶಿಸಿ ಓಡಾಡುತ್ತಿದ್ದ ಆಟೊ ಚಾಲಕರಿಗೆ ಆರ್‌ಟಿಒ ದಂಡದ ಬಿಸಿ ಮುಟ್ಟಿಸಿದೆ. 500 ರೂ. ಇಲ್ಲವಙೇ ಸಾವಿರ ರೂಪಾಯಿಗಾಗಿ ಆಟೊಗೆ ಪೋಸ್ಟರ್ ಅಂಟಿಸಿಕೊಂಡು ಓಡಾಡುತ್ತಿರುವುದಕ್ಕೆ ಈಗ ಸಾವಿರಾರು ರೂ. ದಂಡ ಕಟ್ಟುವಂತಾಗಿದೆ.
ಆಟೋಗಳ ಮೇಲೆ ಪೋಸ್ಟರ್ ಅಂಟಿಸಿದವರಿಗೆ ಆರ್‌ಟಿೊ 5,000 ರೂ. ದಂಡ ಪ್ರಯೋಗ ಮಾಡಿರುವುದು ಚಾಲಕರಿಗೆ ಸಂಕಷ್ಟವಾಗಿ ಪರಿಣಮಿಸಿದೆ. ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳಲ್ಲಿ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ವಾರ್ಷಿಕವಾಗಿ ಅನುಮತಿ ಪಡೆದಿರಬೇಕು.
ಏನೇ ಜಾಹೀರಾತು ಅಳವಡಿಸಿದರೂ ವರ್ಷಕ್ಕೆ 5,000 ರೂ. ಕಟ್ಟಬೇಕು. ಅನುಮತಿ ಪಡೆದಿದ್ದರೆ ವರ್ಷವಿಡೀ ಜಾಹೀರಾತು ಅಳವಡಿಕೆಗೆ ಅವಕಾಶ ಇದೆ. ಈ ನಗರದ ಬಹುತೇಕ ಆಟೋ ಚಾಲಕರು ಅನುಮತಿ ಪಡೆಯದೆ ಹಣದ ಆಸೆಗೆ ಆಟೋ ಹಿಂದೆ ಜಾಹೀರಾತು ಪೋಸ್ಟರ್ ಹಾಕಿಸಿ ಆರ್‌ಟಿಒಗೆ ದಂಡ ಪಾವತಿಸುವಂತಾಗಿದೆ.
ಸಾರಿಗೆ ಸಚಿವರ ಸೂಚನೆಯಂತೆ ಆಟೋ ಚಾಲಕರ ಎಫ್‌ಸಿ, ಪರ್ಮಿಟ್, ಮೀಟರ್ ಅಳವಡಿಕೆಯನ್ನ ಆರ್‌ಟಿಒ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಲಾಗುತ್ತಿತ್ತು. ಈ ವೇಳೆ ಕೆಲವೊಂದು ಪೋಸ್ಟರ್ ಆಟೊ ಹಿಂದೆ ಹಾಕಿದ್ದಕ್ಕೆ ನಗರದ ಸಾವಿರಾರು ಆಟೋಗಳಿಗೆ ದಂಡದ ಬಿಸಿ ತಟ್ಟಿದೆ.