ರಾಜ್ಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿದ ಕರ್ನಾಟಕ ಜಿಯೋಗ್ರಾಫಿಕ್ ಇನ್ನರ್ಮೇಶನ್ ಸಿಸ್ಟಂ (K-GIS) ವೇದಿಕೆ, ಸರ್ಕಾರದ ವಿವಿಧ ಇಲಾಖೆಗಳಿಗೂ ನಾಗರಿಕರಿಗೂ ಸ್ಥಳಾಧಾರಿತ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಡಿಜಿಟಲ್ ಮೂಲವಾಗಿದೆ.
ಕರ್ನಾಟಕ ರಾಜ್ಯ ದೂರಸಂಪರ್ಕ ಅನ್ವಯಿಕ ಕೇಂದ್ರ (KSRSAC) ರಾಜ್ಯ ಸರ್ಕಾರದ ಇ-ಆಡಳಿತ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. 1986ರಿಂದ ಭೂಗೋಳ ಮಾಹಿತಿ ತಂತ್ರಜ್ಞಾನದ ಮೂಲಕ ಯೋಜನೆ, ನಿಗಮ ಮತ್ತು ನಿರ್ಣಯ ಪ್ರಕ್ರಿಯೆಗಳಲ್ಲಿ ನವೀನತೆಯನ್ನು ತಂದಿದೆ.
ರಾಜ್ಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿದ ಕರ್ನಾಟಕ ಜಿಯೋಗ್ರಾಫಿಕ್ ಇನ್ನರ್ಮೇಶನ್ ಸಿಸ್ಟಂ (K-GIS) ವೇದಿಕೆ, ಸರ್ಕಾರದ ವಿವಿಧ ಇಲಾಖೆಗಳಿಗೂ ನಾಗರಿಕರಿಗೂ ಸ್ಥಳಾಧಾರಿತ ಮಾಹಿತಿಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಡಿಜಿಟಲ್ ಮೂಲವಾಗಿದೆ.
K-GIS ವ್ಯವಸ್ಥೆಯ ಮೂಲಕ ಕರ್ನಾಟಕ ಸರ್ಕಾರವು ಪಾರದರ್ಶಕ, ವೇಗದ ಮತ್ತು ವೈಜ್ಞಾನಿಕ ಆಡಳಿತ ವ್ಯವಸ್ಥೆಯನ್ನು ನಿರ್ಮಿಸಿ, ಯೋಜನೆಗಳಿಂದ ಪ್ರಾಯೋಗಿಕ ನಿರ್ಧಾರಗಳವರೆಗೆ ಭೂಗೋಳ ಮಾಹಿತಿ ತಂತ್ರಜ್ಞಾನವನ್ನು ಸಕ್ರಿಯವಾಗಿ ಬಳಸುತ್ತಿದೆ.
K-GISನ ಮುಖ್ಯ ಯಶಸ್ವಿ ಉಪಯೋಗಗಳು
ಭೂಮಿ ಮತ್ತು ಆಸ್ತಿ ನಿರ್ವಹಣೆ: “ದಿಶಾಂಕ್” ಆಪ್ ಮೂಲಕ ನಾಗರಿಕರು ತಮ್ಮ ಭೂಮಿ, ಸರ್ವೇ ಸಂಖ್ಯೆ ಹಾಗೂ RTC ವಿವರಗಳನ್ನು ನೇರವಾಗಿ ವೀಕ್ಷಿಸಿ ಮಾಹಿತಿ ಪಡೆಯಬಹುದು. “ಈ-ಖಾತಾ” ಮತ್ತು “ಈ-ಸ್ವತ್ತು” ಆ್ಯಪ್‌ಗಳ ಮೂಲಕ ಪಾರದರ್ಶಕ ಭೂ ದಾಖಲೆ ನಿರ್ವಹಣೆ ಸಾಧ್ಯವಾಗಿದೆ.
“ನ್ಯೂ ಗಾಂಧಿ ಸಾಕ್ಷ ಕಾಯಕ (NGSK)” ಆ್ಯಪ್‌ನಿಂದ ಗ್ರಾಮೀಣ ರಸ್ತೆಗಳ ಕಾಮಗಾರಿಗಳ ಪ್ರಗತಿಯನ್ನು ಜಿಯೋ-ಫೆನ್ಸಿಂಗ್ ಮೂಲಕ ಟ್ರ್ಯಾಕ್ ಮಾಡಿ ಪಾವತಿಗಳನ್ನು ಖಜಾನೆ ವ್ಯವಸ್ಥೆಯೊಂದಿಗೆ ಸಂಯೋಜಿಸಲಾಗಿದೆ. ಇದೊಂದು ವಿನೂತನ ಪ್ರಯೋಗವಾಗಿದ್ದು ಪಾರದರ್ಶಕ ವ್ಯವಸ್ಥೆಯ ಭಾಗವಾಗಿದೆ.
ಕೃಷಿ ಮತ್ತು ಪರಿಸರ ನಿರ್ವಹಣೆ
ಮಣ್ಣಿನ ಮಾದರಿ ಸಂಗ್ರಹಿಸುವ (ಸಾಯಿಲ್ ಸ್ಯಾಂಪಲ್ ಕಲೆಕ್ಟರ್) ಆ್ಯಪ್‌ನಿಂದ ರೈತರ ಭೂಮಿ ಆಧಾರಿತ ಮಣ್ಣಿನ ಮಾದರಿ ಸಂಗ್ರಹಿಸಿ ಫಲಿತಾಂಶವನ್ನು ನೇರವಾಗಿ FRUITS ಪೋರ್ಟಲ್‌ಗೆ ಸೇರಿಸಲಾಗುತ್ತಿದೆ. ಹಾಗೆಯೇ ಅರಣ್ಯ ಬೆಂಕಿ ಎಚ್ಚರಿಕೆ ವ್ಯವಸ್ಥೆ ಮತ್ತು ಮರಗಳ ಜನಗಣತಿ ಆ್ಯಪ್‌ಗಳು ಪರಿಸರ ಸಂರಕ್ಷಣೆಗೆ ಸಹಕಾರಿಯಾಗಿವೆ.
ನಗರಾಭಿವೃದ್ಧಿ ಮತ್ತು ನೀರಿನ ನಿರ್ವಹಣೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂಮಿಯ ನೀರಿನ ಪ್ರವೇಶ ಸಾಮರ್ಥ್ಯ ಅಧ್ಯಯನದಿಂದ ಭೂಗತ ನೀರಿನ ಪುನಃಭರ್ತಿಗೆ ಮಾರ್ಗದರ್ಶನ, ಮಾಹಿತಿ ದೊರೆಯುತ್ತದೆ. ಬಿಟಿಬಿಎಂ ಪ್ರದೇಶದಲ್ಲಿನ ತ್ಯಜಿಸಲಾದ ಕ್ವಾರಿಗಳನ್ನು ನೀರಿನ ಕೆರೆಗಳಾಗಿ ಪರಿವರ್ತಿಸಲು GIS ವ್ಯವಸ್ಥೆಯನ್ನು ಯಶಸ್ವಿಯಾಗಿ ಬಳಸಲಾಗುತ್ತಿದೆ. K-GIS ವ್ಯವಸ್ಥೆಯಿಂದ ವ್ಯಾಪಕವಾದಂತಹ ಜನಸ್ನೇಹಿ, ಜನೋಪಯೋಗಿ ಕಾರ್ಯಗಳನ್ನು ಕರ್ನಾಟಕ ಸರ್ಕಾರ ಯಶಸ್ವಿಯಾಗಿ ಕೈಗೊಂಡಿದೆ ಮತ್ತು ಭೂಗೋಳ ಮಾಹಿತಿ ತಂತ್ರಜ್ಞಾನವನ್ನು ಸಕ್ರಿಯವಾಗಿ ಬಳಸುತ್ತಿದೆ. ಇದು ನಿಖರ ನಿರ್ಧಾರ, ಸಂಪನ್ಮೂಲಗಳ ಸಮರ್ಪಕ ಬಳಕೆ ಮತ್ತು ನಾಗರಿಕ-ಕೇಂದ್ರಿತ ಆಡಳಿತಕ್ಕೆ ಹೊಸ ದಾರಿಯನ್ನು ತೆರೆದಿದೆ.


