ಮೈಸೂರಿನ ವರುಣಾ ನಾಲೆ ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ನೀರಿಗೆ ಇಳಿದ ಸಹೋದರರು ಬಾಲಕನನ್ನು ಬದುಕಿಸಿ ತಾವೇ ಜಲಸಮಾಧಿ ಆಗಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.
ನಾಲೆಯಲ್ಲಿ ಈಜಲು ಹೋಗಿದ್ದ ಬಾಲಕ ಮುಳುಗುತ್ತಿರುವುದನ್ನು ನೋಡಿದ ನಾಲೆಯ ಮೇಲ್ಗಡೆ ನಡೆದುಕೊಂಡು ಬರುತ್ತಿದ್ದ ಸಹೋದರರು ಆತನ ರಕ್ಷಣೆಗೆ ನಾಲೆಗೆ ಜಿಗಿದಿದ್ದಾರೆ.ಮುಳುಗುತ್ತಿದ್ದ ಬಾಲಕನನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿದ್ದಾರೆ, ಸಹೋದರರು ಸುಸ್ತಾಗಿ ನೀರಿನಿಂದ ಮೇಲೆ ಬರಲು ಆಗದೆ ಜಲಸಮಾಧಿ ಆಗಿದ್ದಾರೆ.
ಬಡಗಲಹುಂಡಿ ಗ್ರಾಮದ ರಮೇಶ್ ಪುತ್ರ ನವ ವಿವಾಹಿತ (25) ನಂದನ್ (ಹದಿನೈದು ದಿನಗಳ ಹಿಂದೆಯಷ್ಟೆ ನಂದನ್ ತಾನು ಪ್ರೀತಿಸುತ್ತಿದ್ದ ಚನ್ನಪಟ್ಟಣದ ಯುವತಿ ಜೊತೆ ಮದುವೆಯಾಗಿದ್ದ.) ಹಾಗೂ ಅವರ ಸಹೋದರನ ಪುತ್ರ ರಾಕೇಶ್ (20) ಮೃತಪಟ್ಟ ಸಹೋದರರು.
ನಾಲೆಯಲ್ಲಿ ಈಜಲು ತೆರೆಳಿದ್ದ ಬಾಲಕ ಮಂಜು ನೀರಿನಲ್ಲಿ ಮುಳುಗುತ್ತಿದ್ದ ವೇಳೆ ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ಈ ಸಹೋದರರು ಆತನನ್ನು ರಕ್ಷಿಸಲು ಹೋಗಿ ಸುಸ್ತಾಗಿ ನೀರಿನಿಂದ ಮೇಲೆ ಬರಲಾಗದೆ ನೀರುಪಾಲಾಗಿದ್ದಾರೆ. ಹದಿನೈದು ದಿನಗಳ ಹಿಂದೆಯಷ್ಟೆ ನಂದನ್ ತಾನು ಪ್ರೀತಿಸುತ್ತಿದ್ದ ಚನ್ನಪಟ್ಟಣದ ಯುವತಿ ಜೊತೆ ಮದುವೆಯಾಗಿದ್ದ.
ನೆಲಮಂಗಲದ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ
ನೆಲಮಂಗಲದ ಇಸ್ಲಾಂಪುರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯನ ಮೇಲೆ ಗುಂಡಿನ ದಾಳಿ ನಡೆದಿದೆ. ಕಣೇಗೌಡನಹಳ್ಳಿ ಗ್ರಾಮ ಪಂಚಾಯತಿ ಸದಸ್ಯ ಸಲೀಂ ಮನೆ ಮುಂದೆ ಬಂದ ಇಬ್ಬರು ವ್ಯಕ್ತಿಗಳು ಸಲೀಂಗೆ ಗುಂಡು ಹಾರಿಸಿದ್ದಾರೆ.
ಏಕಾಏಕಿ ಗುಂಡಿನ ದಾಳಿ ಮಾಡಿ ಅಪರಿಚಿತರು ಪರಾರಿ ಆಗಿದ್ದಾರೆ. ಗಾಯಾಳು ಸಲೀಂ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಲೀಂ ಸಂಬಂಧಿ ಫಿರ್ದೋಸ್, ಇದು ರಾಜಕೀಯ ದುರುದ್ದೇಶದಿಂದ ಮಾಡಿರೋ ಕೃತ್ಯ. ಸಂಜೆ ಸಲೀಂ ನಮಾಝ್ ಮುಗಿಸಿ ಅಂಗಡಿಯೊಂದರ ಮುಂದೆ ಕುಳಿತಿದ್ದಾಗ ಗಾಡಿಯಲ್ಲಿ ಬಂದ ಒಬ್ಬ ತಾನು ಮುಬಾರಕ್ ಪಾಷ ಕಡೆಯವನು ಎಂದು ಹೇಳಿ ಗುಂಡು ಹಾರಿಸಿದ್ದಾನೆ. ಬಳಿಕ ಗಾಡಿಯಲ್ಲಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.


