ಅಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿ ತಲುಪಿ ಬದುಕುಳಿಯುವ ಸಾಧ್ಯತೆ ಕ್ಷೀಣಿಸಿದ ಹಿನ್ನೆಲೆಯಲ್ಲಿ ಆ ವ್ಯಕ್ತಿಯ ಕುಟುಂಬದವರು ಅಂಗಾಗ ದಾನ ಮಾಡಲು ಮುಂದಾಗಿದ್ದಾರೆ.
ಪಾವಗಡ ಮೂಲದ ದಾಸಣ್ಣ (35) ಜುಲೈ 9 ರಂದು ಪಾವಗಡದಿಂದ ಕೆಲಸದ ನಿಮಿತ್ತ ಕೆ ಆರ್ ಪೇಟೆಗೆ ಹೋಗಿದ್ದಾಗ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದರು.
ಮಂಡ್ಯ ಕೆ ಆರ್ ಪೇಟೆ ಬಳಿ ನಡೆದಿದ್ದ ಅಪಘಾತದ ಬಳಿಕ ಗಾಯಗೊಂಡಿದ್ದ ದಾಸಣ್ಣ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬದುಕುಳಿಯುವ ಸಾಧ್ಯತೆ ಕಡಿಮೆಯಾಗಿದ್ದು, ಕುಟುಂಬದವರು ಈಗಾಗಲೇ ಸರ್ಕಾರಕ್ಕೆ ಮಾಹಿತಿ ನೀಡಿ ಅಂಗಾಂಗ ದಾನಕ್ಕೆ ವ್ಯವಸ್ಥೆ ಮಾಡಿದ್ದಾರೆ.