Menu

ತಾಯಿ-ಮಗಳ ಸ್ನಾನದ ವೀಡಿಯೋ ಮಾಡುತ್ತಿದ್ದ ಯುವಕ ಅರೆಸ್ಟ್

bengaluru crime

ಬೆಂಗಳೂರು: ತಾಯಿ – ಮಗಳು ಸ್ನಾನ ಮಾಡುವಾಗ ವಿಡಿಯೋ ಮಾಡುತ್ತಿದ್ದ ಯುವಕನನ್ನು  ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚೆನ್ನಸಂದ್ರ ನಿವಾಸಿ ಮೊಯಿನುದ್ದೀನ್ (24) ಬಂಧಿತ ಆರೋಪಿ. ಅಪ್ರಾಪ್ತ ಮಗಳೊಂದಿಗೆ ತಾಯಿ ಸ್ನಾನ ಮಾಡುತ್ತಿದ್ದಾಗ ಬಾತ್ ರೂಮ್‌ನ ಕಿಟಕಿಯಿಂದ ಆರೋಪಿ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿಯುತ್ತಿದ್ದ.

ಮಹಿಳೆಯ ಪತಿ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು, ಆರೋಪಿಯನ್ನ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೂರುದಾರರ ಮನೆಯ ಸಮೀಪದಲ್ಲೇ ಸ್ಥಳೀಯ ನಿವಾಸಿಯಾಗಿದ್ದ ಆರೋಪಿ, ಜುಲೈ 8ರಂದು ಬೆಳಗ್ಗೆ 6:30ರ ಸುಮಾರಿಗೆ ಕೃತ್ಯ ಎಸಗುತ್ತಿರುವುದನ್ನು ಬಾಲಕಿ ಗಮನಿಸಿ, ತಾಯಿಗೆ ಹೇಳಿದ್ದಳು. ಹೊರಗೆ ಬಂದು ಗಮನಿಸುವಷ್ಟರಲ್ಲಿ ಆರೋಪಿ ಓಡಿ ಹೋಗುತ್ತಿರುವುದನ್ನ ದಂಪತಿ ಗಮನಿಸಿದ್ದರು. ತಕ್ಷಣ ಮಹಿಳೆಯ ಪತಿ ಕಾಡುಗೋಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಬಂಧಿತ ಆರೋಪಿ ಕಾಡುಗೋಡಿಯಲ್ಲಿ ಎಲೆಕ್ಟ್ರಿಶಿಯನ್ ಕೆಲಸ ಮಾಡುತ್ತಿದ್ದ. ಆತನ ಮೊಬೈಲ್ ಫೋನ್‌ನಲ್ಲಿದ್ದ ವಿಡಿಯೋ ಡಿಲೀಟ್ ಮಾಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *