Menu

ಏರ್ ಇಂಡಿಯಾ ವಿಮಾನ ದುರಂತಕ್ಕೆ ಇಂಜಿನ್ ಗೆ ಇಂಧನ ಪೂರೈಕೆ ನಿಂತಿದ್ದೇ ಕಾರಣ: ವರದಿ

plane crash pm visit

ಅಹಮದಾಬಾದ್‌ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ 260 ಜನ ಮೃತಪಟ್ಟ ದುರಂತಕ್ಕೆ ಇಂಜಿನ್ ಗಳಿಗೆ ಇಂಧನ ಪೂರೈಕೆ ದಿಢೀರ್ ನಿಂತಿದ್ದೇ ಕಾರಣ ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿ ತಿಳಿಸಿದೆ.

ವಿಮಾನ ಅಪಘಾತ ತನಿಖಾ ಬ್ಯೂರೋ ನೀಡಿದ 15 ಪುಟಗಳ ವರದಿಯಲ್ಲಿ ಪೈಲಟ್‌ಗಳ ಕಾಕ್‌ಪಿಟ್‌ ಧ್ವನಿ ರೆಕಾರ್ಡಿಂಗ್‌ ಡೇಟಾವನ್ನ ಉಲ್ಲೇಖಿಸಲಾಗಿದೆ. ಇದರಲ್ಲಿ ವಿಮಾನವು ವಾಯುಪ್ರದೇಶಕ್ಕೆ ತಲುಪಿದ ಕೆಲವೇ ಸೆಕೆಂಡುಗಳಲ್ಲಿ ಎರಡು ಇಂಜಿನ್ ಗಳಿಗೆ ಪೂರೈಕೆಯಾಗುತ್ತಿದ್ದ ಇಂಧನ ದಿಢೀರ್ ನಿಂತಿದ್ದೇ ಕಾರಣ ಎಂದು ಪ್ರಮುಖವಾಗಿ ಉಲ್ಲೇಖಿಸಲಾಗಿದೆ.

ಅಪಘಾತಕ್ಕೆ ಕೆಲ ಸೆಕೆಂಡುಗಳಿಗೂ ಮುನ್ನ ನಡೆದ ಸಂಭಾಷಣೆಯ ಒಂದು ಭಾಗದಲ್ಲಿ ಇದು ತಿಳಿದಿದೆ. ಜೊತೆಗೆ ವಿಮಾನವು 8 ಡಿಗ್ರಿ ಮೂಗು ಮೇಲಕ್ಕೆತ್ತಿದ ಸ್ಥಿತಿಯಲ್ಲಿತ್ತು. ಆದರೆ ಇಂಜಿನ್‌ಗಳು ಆಫ್ ಆಗಿದ್ದವು. ಇದರಿಂದ ವಿಮಾನವು ಏರಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿದಿದೆ.

ಟೇಕ್ ಆಫ್ ಆದ 3 ಸೆಕೆಂಡ್‌ಗಳ ನಂತರ, ಎರಡೂ ಇಂಜಿನ್‌ಗಳ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳು ರನ್‌ ನಿಂದ ಕಟ್ ಆಗಿದ್ದವು. ಇದರಿಂದಾಗಿ ಥ್ರಸ್ಟ್ ಇದ್ದಕ್ಕಿದ್ದಂತೆ ಕಡಿಮೆಯಾಯಿತು. ಅಲ್ಲದೇ ಒಂದು ಪೈಲಟ್ ʻನೀವು ಏಕೆ ಕಟ್ ಆಫ್ ಮಾಡಿದ್ರಿ?ʼ ಎಂದು ಕೇಳುವುದು ಕೇಳಿಸುತ್ತದೆ. ಅದಕ್ಕೆ ಇನ್ನೊಬ್ಬ ಪೈಲಟ್ ʻನಾನು ಮಾಡಿಲ್ಲʼ ಎಂದು ಉತ್ತರಿಸುತ್ತಾರೆ. ಇದರಿಂದ ತಾಂತ್ರಿಕ ದೋಷ ಅಥವಾ ಆಕಸ್ಮಿಕವಾಗಿ ಸ್ವಿಚ್ ಆಫ್ ಆಗಿರಬಹುದು ಎಂದು ಶಂಕಿಸಲಾಗಿದೆ.

ಫ್ಲೈಟ್ ಡೇಟಾ ರೆಕಾರ್ಡರ್‌ ಪ್ರಕಾರ, ಇಂಜಿನ್-1 ಅನ್ನು ಸ್ವಯಂಚಾಲಿತವಾಗಿ ಮರುಪ್ರಾರಂಭಿಸಲು ಪ್ರಯತ್ನಿಸಿ, ಅದು ಯಶಸ್ವಿಯಾಯಿತು. ಆದ್ರೆ ಇಂಜಿನ್ 2 ಅನ್ನು ಮರುಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ರಾಮ್ ಏರ್ ಟರ್ಬೈನ್ (RAT) ಅನ್ನು ತುರ್ತು ವಿದ್ಯುತ್ ಮೂಲವಾಗಿ ಬಳಸಲಾಗಿತ್ತು. ಇದು ಟೇಕ್ ಆಫ್ ಆದ ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇದರಿಂದ ಅಗತ್ಯ ಸಿಸ್ಟಮ್‌ಗಳಿಗೆ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿತು ಎಂದು ವರದಿ ತಿಳಿಸಿದೆ. RAT ಅಂದರೆ ವಿಮಾನದಲ್ಲಿನ ಎಲೆಕ್ಟ್ರಿಕಲ್ ವ್ಯವಸ್ಥೆ ಕೈಕೊಟ್ಟಾಗ ಉಪಯೋಗಿಸುವ ಒಂದು ಸಾಧನ.

Related Posts

Leave a Reply

Your email address will not be published. Required fields are marked *