ಸರ್ರೆ: ಕಾಮಿಡಿ ಶೋ ನಿರೂಪಕ ಹಾಗೂ ನಟ ಕಪಿಲ್ ಶರ್ಮ ಕೆನಡಾದಲ್ಲಿ ಆರಂಭಿಸಿದ ಕಪಿಲ್ಸ್ ಕೆಫೆ ಮೇಲೆ ಖಾಲಿಸ್ತಾನಿ ಪ್ರತ್ಯೇಕವಾದಿ ಉಗ್ರ ಗುಂಡು ಹಾರಿಸಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಕಪಿಲ್ ಶರ್ಮ ಒಡೆತನದ ಕೆಪೆ ಉದ್ಘಾಟನೆಗೊಂಡ ಮಾರನೆ ದಿನ ಅಂದರೆ ಬುಧವಾರ ಖಾಲಿಸ್ತಾನಿ ಪ್ರತ್ಯೇಕವಾದಿ ಉಗ್ರ ಕನಿಷ್ಟ 9 ಸುತ್ತು ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.
ಕೆನಡಾದ ಬ್ರೊಟಿಷ್ ಕೊಲಂಬೊಯಾದ ಸರ್ರೆಯಲ್ಲಿ ಕಪಿಲ್ಸ್ ಕೆಫೆ ಆರಂಭವಾಗಿದ್ದು,ಪತ್ನಿ ಗಿನಿ ಕೂಡ ಪಾಲುದಾರರಾಗಿದ್ದಾರೆ. ಕಾರಿನಲ್ಲಿ ಕುಳಿತಿದ್ದ ಉಗ್ರ ಕೆಫೆ ಮೇಲೆ 9 ಸುತ್ತು ಗುಂಡು ಹಾರಿಸಿದ್ದಾರೆ.
ಖಾಲಿಸ್ತಾನಿ ಬಗ್ಗೆ ಕಪಿಲ್ ಶರ್ಮ ತಮ್ಮ ಕಾಮಿಡಿ ಶೋನಲ್ಲಿ ವ್ಯಂಗ್ಯವಾಡಿದ್ದಕ್ಕೆ ಪ್ರತಿಕಾರವಾಗಿ ಎಚ್ಚರಿಕೆ ನೀಡಲು ಗುಂಡು ಹಾರಿಸಲಾಗಿದೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಖಾಲಿಸ್ತಾನಿ ಉಗ್ರ ಹರ್ಜಿತ್ ಸಿಂಗ್ ಲಡ್ಡಾ ಎಂಬಾತ ದಾಳಿಯ ಹೊಣೆ ಹೊತ್ತಿದ್ದು, ಈತನನ್ನು ಎನ್ ಐ ಎ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ.