ಮಧ್ಯಮ ವೇಗಿ ಹರ್ಷಿತ್ ರಾಣಾ ಮಾರಕ ದಾಳಿ ನೆರವಿನಿಂದ ಭಾರತ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 236 ರನ್ ಗೆ ಆಲೌಟ್ ಮಾಡಿದೆ.
ಸಿಡ್ನಿಯಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದ ಆಸ್ಟ್ರೇಲಿಯಾ ತಂಡ 46.4 ಓವರ್ ಗಳಲ್ಲಿ 236 ರನ್ ಗೆ ಪತನಗೊಂಡಿತು.
ಹರ್ಷಿತ್ ರಾಣಾ 39 ರನ್ ನೀಡಿ 4 ವಿಕೆಟ್ ಪಡೆದು ಜೀವನ ಶ್ರೇಷ್ಠ ಸಾಧನೆ ಮಾಡಿದರು. ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.
ಹರ್ಷಿತ್ ರಾಣಾ 39 ರನ್ ನೀಡಿ 4 ವಿಕೆಟ್ ಪಡೆದು ಜೀವನ ಶ್ರೇಷ್ಠ ಸಾಧನೆ ಮಾಡಿದರು. ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.
ಈಗಾಗಲೇ 2-0ಯಿಂದ ಸರಣಿ ಗೆದ್ದಿರುವ ಆಸ್ಟ್ರೇಲಿಯಾ ತಂಡದ ಆರಂಭ ಉತ್ತಮವಾಗಿಯೇ ಇತ್ತು. ಆದರೆ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದರಿಂದ ಬೃಹತ್ ಮೊತ್ತ ದಾಖಲಿಸಲು ವಿಫಲವಾಯಿತು.
ನಾಯಕ ಮಿಚೆಲ್ ಮಾರ್ಷ್ (41) ಮತ್ತು ಟ್ರಾವಿಸ್ ಹೆಡ್ (29) ಮೊದಲ ವಿಕೆಟ್ ಗೆ 61 ರನ್ ಜೊತೆಯಾಟ ನಿಭಾಯಿಸಿ ಉತ್ತಮ ಆರಂಭ ನೀಡಿದರು. ನಂತರ ಮ್ಯಾಥ್ಯೂ ಶಾರ್ಟ್ (30) ಕೂಡ ತಕ್ಕಮಟ್ಟಿಗೆ ಕೊಡುಗೆ ನೀಡಿದರು.
ಮ್ಯಾಟ್ ರೇನ್ ಶಾ 58 ಎಸೆತಗಳಲ್ಲಿ 2 ಬೌಂಡರಿ ಒಳಗೊಂಡ 56 ರನ್ ಬಾರಿಸಿ ಅರ್ಧಶತಕದ ಗೌರವಕ್ಕೆ ಪಾತ್ರರಾದರು. ಅಲೆಕ್ಸ್ ಕ್ಯಾರಿ (24) ಮತ್ತು ಕೂಪರ್ ಕಾನ್ಲೆ (23) ನಂತರ ಬಂದ ಬ್ಯಾಟ್ಸ್ ಮನ್ ಗಳು ಬೇಗನೇ ಪೆವಿಲಿಯನ್ ಸೇರಿಕೊಂಡಿದ್ದರಿಂದ ತಂಡ ಮುಗ್ಗರಿಸಿತು


