ಬೆಂಗಳೂರು: ನಗರದಲ್ಲಿನ ಅವೈಜ್ಞಾನಿಕ ಅಸಮರ್ಪಕ ಬಸ್ ನಿಲ್ದಾಣಗಗಳನ್ನು ಸ್ಥಳಾಂತರ ಮಾಡಲು ಸಂಚಾರ ಪೊಲೀಸರು ಹಾಗೂ ಬಿಎಂಟಿಸಿ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಪಟ್ಟಿ ಸಿದ್ಧಪಡಿಸಿದ್ದಾರೆ.
ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದ್ದು, ಟ್ರಾಫಿಕ್ ಸಿಗ್ನಲ್ಗಳ ಬಳಿಯೇ ಬಸ್ ನಿಲ್ದಾಣಗಳಿರುವುದೂ ಕೂಡ ಟ್ರಾಫಿಕ್ ಜಾಮ್ ಹೆಚ್ಚಾಗಲು ಕಾರಣವಾಗಿದೆ. ಇದರಿಂದ ಸಂಚಾರ ಪೊಲೀಸರು, ಬಿಎಂಟಿಸಿ ಅಧಿಕಾರಿಗಳ ಜೊತೆ ಜಂಟಿ ಸಮೀಕ್ಷೆ ನಡೆಸಿ ಸ್ಥಳಾಂತರ ಮಾಡಬೇಕಾದ 103 ಬಸ್ ನಿಲ್ದಾಣಗಳ ಪಟ್ಟಿ ಮಾಡಿದ್ದಾರೆ.
ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ
ಸಾಮಾನ್ಯವಾಗಿ ಹೆಚ್ಚಿನ ದಟ್ಟಣೆಯ ಸಿಗ್ನಲ್ಗಳಿಗೆ ಸಮೀಪವಿರುವ 103 ಬಸ್ ನಿಲ್ದಾಣಗಳನ್ನು ಕನಿಷ್ಠ 50 ಮೀಟರ್ಗಳಿಂದ 300 ಮೀಟರ್ಗಳವರೆಗೂ ಸ್ಥಳಾಂತರ ಮಾಡುವ ಅನಿವಾರ್ಯತೆ ಇದೆ ಎಂದು ಸಂಚಾರ ಪೊಲೀಸರು, ಬಿಎಂಟಿಸಿ ಸಮೀಕ್ಷೆಯಲ್ಲಿ ಮನಗಂಡಿದ್ದಾರೆ. ಹೀಗಾಗಿ ಸ್ಥಳಾಂತರ ಮಾಡಿ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂ, ಎಂ.ಜಿ ರಸ್ತೆ, ಯಲಹಂಕ ಆರ್ಎಂಜೆಡ್, ಈಸ್ಟ್ ಎಂಡ್ ಜಂಕ್ಷನ್, ಐಟಿಪಿಎಲ್ ಆರ್ಎಕ್ಸ್ಡಿಕ್ಸ್ ಆಸ್ಪತ್ರೆ, ಹೋಫ್ಫಾರ್ಮ್ ಜಂಕ್ಷನ್ ಸೇರಿ 103 ಸ್ಥಳಗಳಲ್ಲಿ ಟ್ರಾಫಿಕ್ ದಟ್ಟಣೆ ಇಳಿಸುವ ಉದ್ದೇಶವಿದೆ.