Menu

ಹಾಲಿನ ದರ ಹೆಚ್ಚಳವಿಲ್ಲ: ಸಚಿವ ವೆಂಕಟೇಶ್‌ ಸ್ಪಷ್ಟನೆ

nandini milk

ಬೆಂಗಳೂರು:ರಾಜ್ಯದಲ್ಲಿ ಜೂನ್‌ನಿಂದ ಪ್ರತಿದಿನ ಒಂದು ಕೋಟಿ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದ್ದು, ಹಾಲಿನ ದರ ಏರಿಕೆ ಮಾಡುವುದಿಲ್ಲ ಎಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್‌ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್‌ನಲ್ಲಿ ಲೀಟರ್‌ಗೆ 4ರೂ. ಹಾಲಿನ ದರ ಹೆಚ್ಚಳ ಮಾಡಿದ್ದು, ಅದನ್ನು ಹಾಲಿನ ಉತ್ಪಾದಕರಿಗೆ ನೀಡಲಾಗುತ್ತಿದೆ ಎಂದರು.

65 ಲಕ್ಷ ಲೀಟರ್‌ ಹಾಲು ರಾಜ್ಯ, ಹೊರರಾಜ್ಯ ಮತ್ತು ವಿದೇಶಗಳಲ್ಲಿ ಮಾರಾಟವಾಗುತ್ತದೆ. ಉಳಿದ ಹಾಲನ್ನು ಹಾಲಿನ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದೆ ಎಂದು ಹೇಳಿದರು.ಲೀಟರ್‌ ಹಾಲಿನ ದರವನ್ನು 10ರೂ. ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇತ್ತು. ಆದರೆ, ಗ್ರಾಹಕರ ಹಿತ ಗಮನದಲ್ಲಿಟ್ಟುಕೊಂಡು 4ರೂ. ಹೆಚ್ಚಳ ಮಾಡಲಾಗಿದೆ. ಜೂನ್‌ ಅಂತ್ಯದವರೆಗೆ ಪ್ರತಿ ಲೀಟರ್‌ಗೆ 5ರೂ. ನೀಡುವ ಹಾಲಿನ ಪ್ರೋತ್ಸಾಹಧನವನ್ನು ರೈತರಿಗೆ ನೀಡಲಾಗಿದೆ. ಆಗಸ್ಟ್‌ ಮತ್ತು ಸೆಪ್ಟೆಂಬರ್‌ ತಿಂಗಳ ಹಣ ನೀಡಬೇಕಿದ್ದು, ಸರ್ಕಾರದಿಂದ ಬಿಡುಗಡೆಯಾದ ತಕ್ಷಣ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ರೈತರಿಗೆ ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ನೀಡಲು ಒಕ್ಕೂಟಗಳಿಗೆ ನಿರ್ದೇಶಿಸಲಾಗಿದೆ. ಹಾಲಿನ ದರ ಹೆಚ್ಚಳವಾದ ನಂತರ ನಿತ್ಯ 20ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ರೈತರು ಹಾಗೂ ಗ್ರಾಹಕರ ಸ್ನೇಹಿಯಾಗಿ ಕೆಎಂಎಫ್‌ ಕಾರ್ಯನಿರ್ವಹಿಸುತ್ತಿದ್ದು, ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಶೇ.3ರಿಂದ ಶೇ.4ರಷ್ಟು ಲಾಭಾಂಶ ಇಟ್ಟುಕೊಂಡಿದೆ. ನಂದಿನಿ ಉತ್ಪನ್ನಗಳ ಮಾರಾಟಗಾರರ ಮಾರ್ಜಿನ್‌ಅನ್ನು ಪರಿಷ್ಕರಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರ ಮತ್ತು ಪಕ್ಷದಲ್ಲಾಗುವ ಬದಲಾವಣೆ ಕ್ರಾಂತಿಯಾಗುವುದಿಲ್ಲ. ಏನೇ ಬದಲಾವಣೆಯಾದರೂ ಪಕ್ಷದ ಹೈಕಮಾಂಡ್‌ ಮುಖ್ಯಮಂತ್ರಿ ಗಮನ ಹರಿಸುತ್ತಾರೆ. ಆರ್‌ಎಸ್‌‍ಎಸ್‌‍ ವಿಚಾರದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಒಬ್ಬಂಟಿಯಲ್ಲ, ಅವರ ಜತೆಗೆ ನಾವೆಲ್ಲರೂ ಇದ್ದೇವೆ ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *