Menu

ನಟಿ ಆಲಿಯಾ ಬಟ್ ಗೆ 77 ಲಕ್ಷ ರೂ. ವಂಚಿಸಿದ್ದ ಸಹಾಯಕಿ ಬೆಂಗಳೂರಿನಲ್ಲಿ ಅರೆಸ್ಟ್

alia butt

ಬಾಲಿವುಡ್ ನಟಿ ಆಲಿಯಾ ಬಟ್ ಗೆ 77 ಲಕ್ಷ ರೂ. ವಂಚಿಸಿದ ಅವರ ಮಾಜಿ ಆಪ್ತ ಸಹಾಯಕಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಆಲಿಯಾ ಬಟ್ ಹಾಗೂ ಅವರ ನಿರ್ಮಾಣ ಸಂಸ್ಥೆಗೆ 77 ಲಕ್ಷ ರೂಪಾಯಿ ಹಣಕಾಸು ವಂಚಿಸಿದ್ದಕ್ಕಾಗಿ ಮಾಜಿ ಸಹಾಯಕಿ ವೇದಿಕಾ ಪ್ರಕಾಶ್ ಶೆಟ್ಟಿ (32) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದು, ಪೊಲೀಸ್ ವಶಕ್ಕೆ ನೀಡಲಾಗಿದೆ.

2022 ರಿಂದ 2024 ರ ಅವಧಿಯಲ್ಲಿ ವೇದಿಕಾ ಪ್ರಕಾಶ್ ಶೆಟ್ಟಿ ಆಲಿಯಾರ ಆಪ್ತ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದು, ಆಲಿಯಾ ಅವರ ಎಟರ್ನಲ್ ಸನ್​​ಶೈನ್ ನಿರ್ಮಾಣ ಸಂಸ್ಥೆಗೆ 76.9 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಅವರು ಮುಂಬೈನ ಜುಹು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆಲಿಯಾ ಭಟ್​ರ ಶೂಟಿಂಗ್ ಡೇಟ್ಸ್ ಮತ್ತು ಕೆಲ ಹಣಕಾಸು ದಾಖಲೆಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಜೊತೆಗೆ ಅವರ ನಿರ್ಮಾಣ ಸಂಸ್ಥೆಯಾದ ಎಟರ್ನಲ್ ಸನ್ ಶೈನ್ ನ ಹಣಕಾಸು ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಈ ವೇಳೆ ಆಲಿಯಾರ ಸಹಿ ನಕಲು ಮಾಡಿ ಹಾಗೂ ನಕಲಿ ಬಿಲ್​ಗಳನ್ನು ಸೃಷ್ಟಿಸಿ ನಟಿಯಿಂದ ಸಹಿ ಪಡೆದು ಹಣಕಾಸು ವಂಚನೆ ಮಾಡಿದ್ದರು ಎನ್ನಲಾಗಿದೆ.

ವೇದಿಕಾ, ಹೀಗೆ ವಂಚನೆಯಿಂದ ಪಡೆದ ಹಣವನ್ನು ತನ್ನ ಗೆಳತಿಯ ಖಾತೆಗೆ ವರ್ಗಾಯಿಸಿ, ಅಲ್ಲಿಂದ ಮತ್ತೆ ತಮ್ಮ ಖಾತೆಗೆ ರವಾನೆ ಮಾಡಿಸಿಕೊಳ್ಳುತ್ತಿದ್ದರಂತೆ. ಘಟನೆ ಬೆಳಕಿಗೆ ಬರುತ್ತಲೇ ವೇದಿಕಾ ಪರಾರಿ ಆಗಿದ್ದರು. ಸೋನಿ ರಜ್ದಾನ್ ಅವರು ದೂರು ನೀಡಿದ ಐದು ತಿಂಗಳ ಬಳಿಕ ಇತ್ತೀಚೆಗಷ್ಟೆ ವೇದಿಕಾರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಜುಲೈ 20ರ ವರೆಗೆ ವೇದಿಕಾರನ್ನು ನ್ಯಾಯಾಲಯ ಪೊಲೀಸರ ವಶಕ್ಕೆ ನೀಡಿದೆ.

ಆಲಿಯಾ ಭಟ್ ತಮ್ಮ ಎಟರ್ನಲ್ ಸನ್​ಶೈನ್ ಪ್ರೊಡಕ್ಷನ್ ಸಂಸ್ಥೆಯಿಂದ ‘ಡಾರ್ಲಿಂಗ್ಸ್’, ‘ಜಿಗ್ರಾ’ಸೇರಿದಂತೆ ಇನ್ನೂ ಕೆಲವಾರು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಆಲಿಯಾ ಭಟ್ ಪ್ರಸ್ತುತ ‘ಲವ್ ಆಂಡ್ ವಾರ್’ಸಿನಿಮಾನಲ್ಲಿ ಪತಿ ರಣ್​ಬೀರ್ ಕಪೂರ್ ಜೊತೆಗೆ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಆಲ್ಫಾ’ಹೆಸರಿನ ಆಕ್ಷನ್ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *