ಬೆಂಗಳೂರಿನಲ್ಲಿ ವೈದ್ಯೆಯಾಗಿದ್ದ ಪತ್ನಿ ಕೃತಿಕಾ ರೆಡ್ಡಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ವೈದ್ಯ ಮಹೇಂದ್ರ ರೆಡ್ಡಿ ಪೊಲೀಸ್ ವಿಚಾರಣೆಯಲ್ಲಿ ತಾನು ಆಕೆಗೆ ಅನಸ್ತೇಷಿಯಾ ನೀಡಿ ಕೊಲೆ ಮಾಡಿರುವುದಾಗಿ ಈಗಾಗಲೇ ಒಪ್ಪಿಕೊಂಡಿದ್ದಾನೆ. ತಾನೇ ಖುದ್ದಾಗಿ ಮೆಡಿಕಲ್ ಶಾಪ್ಗೆ ತೆರಳಿ ಡ್ರಗ್ಸ್ ಖರೀದಿಸಿರುವುದಾಗಿಯೂ ಪೊಲೀಸರಿಗೆ ತಿಳಿಸಿದ್ದಾನೆ.
ವಿಷಯ ಮುಚ್ಚಿಟ್ಟು ರೋಗಿಷ್ಟೆಯೊಂದಿಗೆ ನನ್ನ ಮದುವೆ ಮಾಡಿರುವ ಆ ಪೋಷಕರ ವಿರುದ್ಧ ಸೇಡು ತೀರಿಸಲು ಹೀಗೆ ಮಾಡಿದ್ದೇನೆ, ಅವರು ನಾನು ಜೀವನದಲ್ಲಿ ಕಂಡಿದ್ದ ಕನಸನ್ನು ನುಚ್ಚುನೂರಾಗಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ. ಇಲ್ಲಿಯವರೆಗೆ ಅನಸ್ತೇಷಿಯಾ ಕೊಟ್ಟಿದ್ದು ತಾನಲ್ಲ ಎಂಬ ಹೇಳಿಕೆಗೆ ಅಂಟಿಕೊಂಡಿದ್ದ ಆರೋಪಿ ಪೊಲೀಸರ ತೀವ್ರಗೊಂಡ ಬಳಿಕ ನಿಜ ಒಪ್ಪಿಕೊಂಡಿದ್ದಾನೆ.
ಅಂದು ಸ್ವತಃ ತಾನೇ ಹೋಗಿದ್ದ ಡ್ರಗ್ಸ್ ಖರೀದಿ ಮಾಡಲು ಮೆಡಿಕಲ್ ಶಾಪ್ ಒಂದಕ್ಕೆ ಹೋಗಿದ್ದ ಮಹೇಂದ್ರ ರೆಡ್ಡಿ. ಮೆಡಿಕಲ್ ಶಾಪ್ಗೆ ಹೋಗಿ ತನಗೆ propfol ಬೇಕು ಎಂದಿದ್ದ. ಆಗ ಸಿಬ್ಬಂದಿ ಅದನ್ನು ಎಲ್ಲರಿಗೂ ಕೊಡಲು ಸಾಧ್ಯವಿಲ್ಲ ಎಂದಿದ್ದ. ಆಗ ತಾನೊಬ್ಬ ಸರ್ಜನ್ ಎಂದು ಹೇಳಿ ಪ್ರಿಸ್ಕ್ಬ್ಶನ್ ನೀಡಿ ಮಹೇಂದ್ರ. ರೆಡ್ಡಿ ಪಡೆದುಕೊಂಡಿದ್ದ.
ನೋವಿನಿಂದ ಬಳಲಿ ಮನೆಯಲ್ಲಿ ಮಲಗಿದ್ದ ಕೃತಿಕಾಗೆ ಆತ ಈ ವೇಳೆ ರಾತ್ರಿ ತೆರಳಿ ಐವಿ ಮೂಲಕ Propofol ನೀಡಿದ್ದ. ಬೆಳಗ್ಗೆ ಏಳುವ ಸಮಯದಲ್ಲಿ ಆಕೆ ಜೀವಂತ ಇರಲಿಲ್ಲ. ಮೊದಲು ನಿದ್ರೆಗೆ ಜಾರಿ ನಂತರ ಕೋಮಾಗೆ ತೆರಳಿದ್ದಳು. ಕೋಮಾದಿಂದ ಹೊರ ತರಲು ಮೆಡಿಸನ್ ನೀಡದ ಕಾರಣ ಕೋಮಾಲ್ಲೇ ಅಸು ನೀಗಿದ್ದರು. ಅಂದು ರಾತ್ರಿ ಕೃತಿಕಾ ಜೊತೆಗೆ ಮಹೇಂದ್ರ ಇದ್ದ ಎಂಬುದಾಗಿ ವಿಚಾರಣೆಯಲ್ಲಿ ಬಯಲಾಗಿದೆ.