ದಾವಣಗೆರೆಯಲ್ಲಿ ಕಾಲೇಜು ವಿದ್ಯಾರ್ಥಿ ಹಾಗೂ ಧಾರವಾಡದಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ದಾವಣಗೆರೆಯ ಜಯನಗರದಲ್ಲಿ ಉದ್ಯಮಿ ರೇಖಾ ಮುರ್ಗೇಶ್ ಪುತ್ರ ಅಕ್ಷಯ್ (22) ಹೃದಯಘಾತಕ್ಕೆ ಬಲಿಯಾದವರು, ಅಕ್ಷಯ್ ಇದ್ದಕ್ಕಿದ್ದಂತೆ ಮನೆಯಲ್ಲಿಯೇ ಕುಸಿದು ಬಿದ್ದಿದ್ದ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಸಾಗಿಸಿದ ಕೆಲವೇ ಕ್ಷಣಗಳಲ್ಲಿ ಅಕ್ಷಯ್ ಮೃತಪಟ್ಟಿದ್ದಾನೆ.
ಧಾರವಾಡ ನಗರದ ಪುರೋಹಿತ್ ನಗರದಲ್ಲಿ ಯುಪಿಎಸ್‌ಸಿ ತಯಾರಿ ಮಾಡುತಿದ್ದ ಯುವತಿ ಹೃದಯಾಘಾತದಿಂದ ಅಸು ನೀಗಿದ್ದಾರೆ. ಜೀವಿತಾ ಕುಸಗೂರ (26) ಮೃತಪಟ್ಟವರು. ಮನೆಯಲ್ಲಿ ತಲೆ ಸುತ್ತು ಬರುತ್ತಿದೆ ಎಂದು ಸುಸ್ತಾಗಿ ಕುಳಿತಿದ್ದ ಆಕೆಯನ್ನು ಕುಟುಂಬದವರು ಖಾಸಗಿ ಆಸ್ಪತ್ರೆಗೆ ಕರೊದೊಯ್ಯುವಾಗ ಮಾರ್ಗ ಮಧ್ಯೆ ಪ್ರಾಣ ಹೋಗಿದೆ.