ಮಂಗಳೂರಿನ ಸುರತ್ಕಲ್ ಬಳಿ ಹೃದಯಾಘಾತದಿಂದ ಡಿಪ್ಲೋಮಾ ವಿದ್ಯಾರ್ಥಿ ಅಫ್ತಾಬ್ (18)ಮೃತಪಟ್ಟಿದ್ದಾರೆ. ಸುರತ್ಕಲ್ ಕೃಷ್ಣಾಪುರದಲ್ಲಿ ಅಫ್ತಾಬ್ ಕುಟುಂಬ ನೆಲೆಸಿದ್ದು, ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಅಫ್ತಾಬ್ ಸುರತ್ಕಲ್ ಸೆಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದರು. ರಾಜ್ಯದಲ್ಲಿ ಹೃದಯಾಘಾತದಿಂದ ಸಾವು ಹೆಚ್ಚುತ್ತಲೇ ಇದೆ, ಆದರೆ ಸರ್ಕಾರ ಮಾತ್ರ ಹೃದಯಾಘಾತಕ್ಕೂ ಕೋವಿಡ್ ಲಸಿಕೆಗೂ ನೇರ ಸಂಬಂಧ ಇಲ್ಲ ಎಂದು ಅಧ್ಯಯನ ಸಮಿತಿ ವರದಿ ನೀಡಿದೆ ಎಂದು ಹೇಳುತ್ತಿದೆ. ಜೀವನಶೈಲಿ, ಅನಾರೋಗ್ಯಕರ ಆಹಾರ ಸೇವನೆ ಕಾರಣ ಎಂದು ಸರ್ಕಾರ ಹೇಳುತ್ತಿದೆ. ಆದರೆ ಆರೋಗ್ಯಕರ ಆಹಾರ, ಜೀವನಶೈಲಿ ಇರುವವರು ಸೇರಿದಂತೆ ಸಣ್ಣ ಮಕ್ಕಳು, ಯುವಕರು, ಮಧ್ಯವಯಸ್ಕರು ಹೃದಯಾಘಾತದಿಂದ ಕುಸಿದು ಸಾಯುತ್ತಿರುವುದು ಆತಂಕಕಾರಿ ವಿಚಾರ.
ಹೃದಯಾಘಾತದಿಂದ ಸಾವಿನ ಹೆಚ್ಚಳ ಸಂಬಂಧ ಸರ್ಕಾರ ಆಸ್ಪತ್ರೆಗಳು ಮತ್ತು ಸಾರವಜನಿಕರಿಗೆ ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಹೃದಯಾಘಾತದಿಂದ ಸಾವು ಸಂಭವಿಸಿದಲ್ಲಿ ಮರಣೋತ್ತರ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ಆದೇಶಿಸಿದೆ.