ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದ ಯುವತಿ ಅಸ್ವಸ್ಥಗೊಂಡು ಶನಿವಾರ ಸಂಜೆ ಆಸ್ಪತ್ರೆಗೆ ತೆರಳುತ್ತಿರುವಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೀನಾಕ್ಷಿ (27) ಮೃತ ಯುವತಿ. ಎದೆ ಉರಿ ಎಂದು ಸಂಜೆ ಆಸ್ಪತ್ರೆಗೆ ಹೊರಟಿದ್ದು, ಮಳೆಯಿಂದ ರಸ್ತೆಗೆ ಮರ ಬಿದ್ದು ಆಸ್ಪತ್ರೆ ತಲುಪುವುದು ತಡವಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋ ಬಿಪಿ ಎಂದು ಹೇಳಿದ್ದರು, ಶನಿವಾರ ನಿನ್ನೆ ಎದೆ ಉರಿ ಜಾಸ್ತಿಯಾಗಿ ಹೃದಯಾಘಾತದಿಂದ ಅಸು ನೀಗಿದ್ದಾರೆ. ಹಾಸನ, ದಕ್ಷಿಣಕನ್ನಡ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಮಕ್ಕಳು ಸೇರಿದಂತೆ ವೃದ್ಧರವರೆಗೆ ಸಾವಿನ ಸರಣಿ ಮುಂದುವರಿಯುತ್ತಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ.
ಹೃದಯಾಘಾತದಿಂದ ಸಾವಿನ ಸಂಬಂಧ ಸರ್ಕಾರ ಅಧ್ಯಯನ ಸಮಿತಿ ರಚಿಸಿದ್ದು, ಹೃದಯಾಘಾತದಿಂದ ಸಾವುಗಳಿಗೂ ಕೋವಿಡ್ ಲಸಿಕೆಗೂ ನೇರ ಸಂಬಂಧ ಇಲ್ಲ ಎಂದು ಅಧ್ಯಯನ ವರದಿ ತಿಳಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆ ಕೂಡ ಅದೇ ಅಭಿಪ್ರಾಯಪಟ್ಟಿದೆ.