ಬಿಎಸ್‌ಎನ್‌ಎಲ್ ದೀಪಾವಳಿ ಪ್ರಯುಕ್ತ ಹೊಸ ಗ್ರಾಹಕರಿಗೆ ವಿಶೇಷವಾದ ಆಫರ್ ಪ್ರಕಟಿಸಿದೆ. 1 ರೂ. ಟೋಕನ್ ಮೊತ್ತಕ್ಕೆ ಒಂದು ತಿಂಗಳ 4G ಫ್ರೀ ಮೊಬೈಲ್ ಸೇವೆ ನೀಡುತ್ತಿದೆ.
ಈ ಆಫರ್ ಅಕ್ಟೋಬರ್ 15ರಿಂದ ನವೆಂಬರ್ 15ರವರೆಗೆ ಇರುತ್ತದೆ. ಈ ಅವಧಿಯಲ್ಲಿ ಹೊಸ ಗ್ರಾಹಕರು ಬಿಎಸ್‌ಎನ್‌ಎಲ್‌ನ ಯಾವುದೇ ಶಾಖೆಗೆ ಭೇಟಿ ನೀಡಿ ಅಥವಾ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಈ ವಿಶೇಷ ಆಫರ್‌ನಲ್ಲಿ ಪ್ರತಿದಿನ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 2GB ಹೈ-ಸ್ಪೀಡ್ ಡೇಟಾ, ದಿನಕ್ಕೆ 100 SMS, ಉಚಿತ ಸಿಮ್ ಕಾರ್ಡ್ ಸಿಗುತ್ತಿದ್ದು, KYC ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ. 1 ರೂ. ಪಾವತಿ ಟೋಕನ್ ಮೊತ್ತವಾಗಿದ್ದು, ಗ್ರಾಹಕರ ದಾಖಲೆ ದೃಢೀಕರಣಕ್ಕಾಗಿ ಬಳಕೆಯಾಗುತ್ತದೆ.
ಬಿಎಸ್‌ಎನ್‌ಎಲ್ ಸೇವೆಗಳ ಗುಣಮಟ್ಟ ಮತ್ತು ನೆಟ್‌ವರ್ಕ್ ವ್ಯಾಪ್ತಿಯು ಉಚಿತ ಅವಧಿ ಮುಗಿದ ನಂತರವೂ ಗ್ರಾಹಕರನ್ನು ನಮ್ಮೊಂದಿಗೆ ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ. ಈ ದೀಪಾವಳಿ ಬೋನಸ್ ಗ್ರಾಹಕರಿಗೆ ನಮ್ಮ 4G ನೆಟ್‌ವರ್ಕ್ ಅನ್ನು ಉಚಿತವಾಗಿ ಅನುಭವಿಸುವ ಅವಕಾಶ ನೀಡುತ್ತದೆ ಎಂದು ಕಂಪೆನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎ. ರಾಬರ್ಟ್ ಜೆ. ರವಿ ಹೇಳುತ್ತಾರೆ. ಬಿಎಸ್‌ಎನ್‌ಎಲ್ ತನ್ನ ಸೇವೆಗಳಲ್ಲಿ ತಂತ್ರಜ್ಞಾನ ನವೀಕರಿಸಿದೆ. ನಮ್ಮ ದೇಶೀಯ ಟೆಲಿಕಾಂ ಮೂಲಸೌಕರ್ಯವು ಖಾಸಗಿ ಕಂಪನಿಗಳಿಗಿಂತ ಕಡಿಮೆ ಅಲ್ಲ ಎಂದು ಹೇಳಿದ್ದಾರೆ.
ಆಗಸ್ಟ್ 2025ರಲ್ಲಿ ಬಿಎಸ್‌ಎನ್‌ಎಲ್ ನೀಡಿದ್ದ ಹಿಂದಿನ ವಿಶೇಷ ಪ್ಲ್ಯಾನ್ ಅಡಿ 1.38 ಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರು ಸೇರಿಕೊಂಡಿದ್ದರು. ಬಿಎಸ್‌ಎನ್‌ಎಲ್ ಏರ್‌ಟೆಲ್ ಅನ್ನು ಹಿಂದಿಕ್ಕಿ ದೇಶದ ಎರಡನೇ ಅತಿದೊಡ್ಡ ಚಂದಾದಾರರ ನೆಟ್‌ವರ್ಕ್ ಆಗಿ ಹೊರಹೊಮ್ಮಿತ್ತು. ಈಗ ದೀಪಾವಳಿ ಹಬ್ಬದ ಸಮಯದಲ್ಲಿ ಇನ್ನಷ್ಟು ಗ್ರಾಹಕರನ್ನು ಸೆಳೆಯಲು ಈ ವಿಶೇಷ ಆಫರ್ ಅನ್ನು ಪ್ರಕಟಿಸಿದೆ.