Thursday, October 16, 2025
Menu

ಸಿಂಗರ್ ವಾರಿಜಶ್ರೀ ಜೊತೆ ಗಾಯಕ ರಘು ದೀಕ್ಷಿತ್ ಮದುವೆ ಫಿಕ್ಸ್‌

ಖ್ಯಾತ ಗಾಯಕ ರಘು ದೀಕ್ಷಿತ್‌ ಅವರು ಸಿಂಗರ್ ವಾರಿಜಶ್ರೀ ವೇಣುಗೋಪಾಲ್ ಅವರನ್ನು ಶೀಘ್ರದಲ್ಲೇ ಮದುವೆಯಾಗಲಿದ್ದಾರೆ, ರಘು ದೀಕ್ಷಿತ್‌ ತನ್ನ ಐವತ್ತನೇ ವರ್ಷದಲ್ಲಿ ಕೊಳಲು ವಾದಕಿ ವಾರಿಜಶ್ರಿ ಜೊತೆ ಎರಡನೇ ಮದುವೆಯಾಗಲು ಸಜ್ಜಾಗಿದ್ದಾರೆ.

ರಘು ದೀಕ್ಷಿತ್ -ವಾರಿಜಶ್ರಿ ಮದುವೆಗೆ ಕುಟುಂದ ಸಮ್ಮತಿ ಸಿಕ್ಕಿದೆ. ವಾರಿಜಶ್ರೀ ಹಾಗೂ ರಘು ನಡುವೆ 16 ವರ್ಷ ವಯಸ್ಸಿನ ಅಂತರವಿದೆ. ಸಾಕಷ್ಟು ವೀಡಿಯೊ ಸಾಂಗ್ ಆಲ್ಬಂಗಳಲ್ಲಿ ಅವರಿಬ್ಬರು ಜೊತೆಯಾಗಿ ಕೆಲಸ ಮಾಡಿದ್ದಾರೆ.

2005ರಲ್ಲಿ ಡ್ಯಾನ್ಸರ್ ಮಯೂರಿ ಉಪಾಧ್ಯ ಅವರನ್ನು ರಘು ದೀಕ್ಷಿತ್ ಮದುವೆಯಾಗಿದ್ದರು. 2019ರಲ್ಲಿ ಅವರಿಬ್ಬರು ವಿಚ್ಛೇದನ ಪಡೆದುಕೊಂಡಿದ್ದಾರೆ. ರಘು ದೀಕ್ಷಿತ್ ತನ್ನ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ತನ್ನನ್ನು ಚುಂಬಿಸಲು ಪ್ರಯತ್ನಿಸುತ್ತಿದ್ದನೆಂದು ಮಹಿಳೆಯೊಬ್ಬರು ಆರೋಪಿಸಿದ್ದರು. ಇತರ ಮಹಿಳೆಯರು ಕೂಡ  ದೀಕ್ಷಿತ್‌ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು.

ಲೈಂಗಿಕ ಕಿರುಕುಳಕ್ಕೆ ಬಲಿಪಶುಗಳಾದ ಪರವಾಗಿ ನಾನು ಸದಾ ನಿಲ್ಲುತ್ತೇನೆ. ಸದಾ ನನ್ನ ಬೆಂಬಲವಿದೆ. ಇಂತಹ ಕಿರುಕುಳ ಆದಾಗ ಕಾನೂನು ಹೋರಾಟ ಮಾಡೋದು ಸೂಕ್ತ ಎನಿಸುತ್ತದೆ. ಯಾಕೆಂದರೆ ಆಗ ಇತರೆ ಮಹಿಳೆಯರ ಘನತೆಗೆ ಚ್ಯುತಿ ತರುವ ಧೈರ್ಯ ಪುರುಷರಿಗೆ ಬರಲ್ಲವೆಂದು ಅಂದುಕೊಂಡಿದ್ದೇನೆ ಎಂದು ಮಯೂರಿ ಹೇಳಿದ್ದರು.

ನನ್ನ ಕಡೆಯಿಂದ ಯಾವುದೇ ತಪ್ಪಾಗಿದ್ದರೆ ನಾನು ಕ್ಷಮೆ ಯಾಚಿಸುತ್ತೇನೆ ಮತ್ತು ಅದನ್ನು ಸರಿಪಡಿಸಲು ಏನು ಬೇಕಾದರೂ ಮಾಡುತ್ತೇನೆ ಎಂದು ರಘು ಆ ಬಳಿಕ ಟ್ವೀಟ್‌ ಮಾಡಿದ್ದರು.
ಅದಾದ ಬಳಿಕ ರಘು ಮತ್ತು ಮಯೂರಿ ಮಧ್ಯೆ ಮನಸ್ತಾಪವುಂಟಾಗಿ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಬಳಿಕ ವಿಚ್ಛೇದನ ಪಡೆದುಕೊಂಡಿದ್ದರು.

Related Posts

Leave a Reply

Your email address will not be published. Required fields are marked *