ಮನೆಯಲ್ಲಿರೋ ಅನುಪಯುಕ್ತ ವಸ್ತುಗಳ ವಿಲೇವಾರಿಗೆ ಬೆಂಗಳೂರಲ್ಲಿ ಅಮೆರಿಕ ಮಾದರಿಯ ಕ್ರಮವೊಂದನ್ನು ಅಳವಡಿಸಲು ಗ್ರೇಟರ್ ಪ್ರಾಧಿಕಾರ ಚಿಂತನೆ ನಡೆಸಿದೆ. ಈ ಮೂಲಕ ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಮುಕ್ತಿ ನೀಡಲು ಜಿಬಿಎ ಮಾಸ್ಟರ್ ಪ್ಲಾನ್ ರೂಪಿಸಿದೆ.
ಹೊಸ ಪ್ಲಾನ್ ಮೂಲಕ ಕಸದ ಸಮಸ್ಯೆಗೆ ಮುಕ್ತಿ ನೀಡಲು ಘನತ್ಯಾಜ್ಯ ನಿರ್ವಹಣಾ ನಿಗಮ ಮುಂದಾಗಿದೆ. ಈ ಮೂಲಕ ಎಲ್ಲೆಂದರಲ್ಲಿ ಬೇಡವಾದ ವಸ್ತುಗಳನ್ನು ಎಸೆಯುವ ಪ್ರವೃತ್ತಿಗೆ ಬ್ರೇಕ್ ಹಾಕುವ ಸಿದ್ಧತೆ ನಡೆಯುತ್ತಿದೆ. ಮುರಿದ ಕುರ್ಚಿ, ಹಳೆ ಟಿವಿ, ಹಾಸಿಗೆ ದಿಂಬು, ಟೇಬಲ್ .ಸೋಪಾ. ಬಟ್ಟೆ, ಶೂ ಸೇರಿದಂತೆ ಅನುಪಯುಕ್ತ ವಸ್ತುಗಳನ್ನು ಸಾರ್ವಜನಿಕರು ರಾತ್ರಿ ವೇಳೆ ಎಲ್ಲೆಂದರಲ್ಲಿ ಎಸೆಯುವ ಚಟಕ್ಕೆ ಜಿಬಿಎ ಕೊನೆ ಹಾಡಲಿದೆ.
ಮನೆ ಮನೆಗೆ ಹೋಗಿ ಅನುಪಯುಕ್ತ ವಸ್ತುಗಳನ್ನು ಕಲೆಕ್ಟ್ ಮಾಡಲು ಘನತ್ಯಾಜ್ಯ ಘಟಕ ಪ್ಲಾನ್ ಮಾಡಿದ್ದು, ನವೆಂಬರ್ 1 ರಿಂದ ಮೊಬೈಲ್ ಆಪ್ ಮೂಲಕ ಈ ಪ್ಲಾನ್ ಜಾರಿಗೆ ಬರುವಂತೆ ಸಿದ್ಧತೆ ನಡೆಸಲಾಗುತ್ತಿದೆ. ಆಪ್ ನಲ್ಲಿ ಮಾಹಿತಿ ಹಾಕಿದರೆ ಮನೆ ಬಳಿ ಬಂದು ನಿರುಪಯುಕ್ತ ವಸ್ತುಗಳನ್ನ ಜಿಬಿಎ ಕೊಂಡೊಯ್ಯಲಿದೆ, ಹೀಗೆ ಬ್ಲಾಕ್ ಸ್ಪಾಟ್ ಗಳಿಗೆ ಕಡಿವಾಣ ಹಾಕಲಿದೆ.
ಈಗಾಗಲೇ ರಸ್ತೆ ಬದ್ದಿಯಲ್ಲಿ ಬಿದ್ದಿರುವ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಲಾಗುತ್ತಿದೆ. ಇನ್ಮುಂದೆ ಎಲ್ಲೆಂದರಲ್ಲಿ ಅನುಪಯುಕ್ತ ವಸ್ತುಗಳನ್ನು ಬಿಸಾಕಿದರೆ ದಂಡ ಬೀಳಲಿದೆ. ನಗರದ 369 ವಾರ್ಡಗಳಲ್ಲಿ ಯೋಜನೆ ಜಾರಿಗೆ ಘನತ್ಯಾಜ್ಯ ಘಟಕ ಪ್ಲಾನ್ ಮಾಡಿದೆ. ಇದಕ್ಕಾಗಿ ಹೆಚ್ಚುವರಿ ಟ್ರಾಕ್ಟರ್ ಬಳಸಲು ಜಿಬಿಎ ತೀರ್ಮಾನಿಸಿದೆ. ನವಂಬರ್ ಒಂದರಂದು ಡಿಸಿಎಂ ಡಿಕೆ ಶಿವಕುಮಾರ್ ಸಂಬಂಧಿಸಿದ ಆಪ್ ಉದ್ಘಾಟಿಸಲಿದ್ದಾರೆ.