Menu

10 ಜಾಗತಿಕ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಬೆಂಗಳೂರು ವಿಮಾನ ನಿಲ್ದಾಣ!

bengaluru airport

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ತನ್ನ ದೇಶೀಯ ಹಾಗೂ ಅಂತಾರಾಷ್ಟ್ರೀಯ ಲೌಂಜ್‌ಗಳಲ್ಲಿ ಚಾಲ್ತಿಗೆ ತಂದಿರುವ ಆಹಾರ, ಪಾನೀಯ (FAB) ಹಾಗೂ ಆತಿಥ್ಯ ಕ್ಷೇತ್ರದಲ್ಲಿ ಜಾಗತಿಕವಾಗಿ ಒಟ್ಟು 10 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಒಮ್ಮೆಲೆ ಇಷ್ಟು ಪ್ರಮಾಣದ ಪ್ರಶಸ್ತಿ ಪಡೆದ ವಿಮಾನ ನಿಲ್ದಾಣಗಳ ಪೈಕಿ ಒಂದಾಗಿದೆ.

ಇತ್ತೀಚೆಗೆ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದ “ವಿಮಾನ ನಿಲ್ದಾಣ ಆಹಾರ, ಪಾನೀಯ (FAB) ಹಾಗೂ ಆತಿಥ್ಯ ಕ್ಷೇತ್ರದ ಸಮ್ಮೇಳನ 2025 ಮತ್ತು ಪ್ರಶಸ್ತಿ ಸಮಾರಂಭ”ದಲ್ಲಿ ಈ ಪ್ರಶಸ್ತಿ ಸ್ವೀಕರಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದ ಲೌಂಜ್‌ ಮತ್ತು ರೆಸ್ಟೋರೆಂಟ್‌ಗಳು ಭಾರತದಲ್ಲಿ ಮಾತ್ರವಲ್ಲದೆ, ಜಾಗತಿಕವಾಗಿಯೂ ತನ್ನ ಶ್ರೇಷ್ಠತೆಯನ್ನು ಸಾಬೀತುಪಡಿಸುತ್ತಿವೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತದ ಮುಖ್ಯ ವಾಣಿಜ್ಯ ಅಧಿಕಾರಿ ಶ್ರೀ ಕೆನ್ನೆತ್ ಗುಲ್ಡ್‌ಬ್ಜೆರ್ಗ್ ಹೇಳಿದರು. ಅದರಲ್ಲೂ ಪ್ರಮುಖವಾಗಿ 080 ಲೌಂಜ್‌ ಒಟ್ಟು 7 ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಟರ್ಮಿನಲ್ 2 ರಲ್ಲಿರುವ 080 ಲೌಂಜ್‌ “ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ ವರ್ಷದ ಅತ್ಯುತ್ತಮ ಲೌಂಜ್” ಪ್ರಶಸ್ತಿಯ ಜೊತೆಗೆ, ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ “ಏರ್‌ಪೋರ್ಟ್ ಎಫ್ & ಬಿ ಆಫರ್ ಆಫ್ ದಿ ಇಯರ್ – ಸೆನ್ಸ್ ಆಫ್ ಪ್ಲೇಸ್ ” ಪ್ರಶಸ್ತಿಯನ್ನು ಪಡೆದುಕೊಂಡಿದೆ. ಟಿ2 ನಲ್ಲಿರುವ 080 ಪ್ರಾದೇಶಿಕ ಲೌಂಜ್‌ನೊಳಗಿನ ಸಿಗ್ನೇಚರ್ ರೆಸ್ಟೋರೆಂಟ್ ಕಿಲಾ, ಗಮನಾರ್ಹ ವಾಸ್ತುಶಿಲ್ಪ ಮತ್ತು ವಾತಾವರಣಕ್ಕಾಗಿ “ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ರೆಸ್ಟೋರೆಂಟ್ ವಿನ್ಯಾಸ” ಪ್ರಶಸ್ತಿಯನ್ನು ಪಡೆದುಕೊಂಡಿದೆ. ಜೊತೆಗೆ, ಟರ್ಮಿನಲ್ 1 ರಲ್ಲಿರುವ 080 ದೇಶೀಯ ಲೌಂಜ್ ಪ್ರಾದೇಶಿಕ ಮತ್ತು ಜಾಗತಿಕ ವಿಭಾಗದಲ್ಲಿ “ವರ್ಷದ ವಿಮಾನ ನಿಲ್ದಾಣ ಲೌಂಜ್ ಓಪನಿಂಗ್” ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದರು.

ಪ್ರಶಸ್ತಿಗಳ ವಿವರ

ಟರ್ಮಿನಲ್‌ 1 ಹಾಗೂ 2 ನಲ್ಲಿರುವ 080 ದೇಶೀಯ ಹಾಗೂ ಅಂತಾರಾಷ್ಟ್ರೀಯ ಲೌಂಜ್ಗಳಿಗೆ ಒಟ್ಟು 10 ಜಾಗತಿಕ ಪ್ರಶಸ್ತಿ ಲಭಿಸಿದೆ.

ವರ್ಷದ ಅತ್ಯುತ್ತಮ ಲೌಂಜ್ – ಪ್ರಾದೇಶಿಕ, ವರ್ಷದ ಅತ್ಯುತ್ತಮ ಲೌಂಜ್, ವಿಮಾನ ನಿಲ್ದಾಣದ ಎಫ್&ಬಿ ವರ್ಷದ ಕೊಡುಗೆ – ಸೆನ್ಸ್ ಆಫ್ ಪ್ಲೇಸ್ – ಪ್ರಾದೇಶಿಕ, ವಿಮಾನ ನಿಲ್ದಾಣದ ಎಫ್&ಬಿ ವರ್ಷದ ಕೊಡುಗೆ – ಸೆನ್ಸ್ ಆಫ್ ಪ್ಲೇಸ್ – ಜಾಗತಿಕ, ಅತ್ಯುತ್ತಮ ರೆಸ್ಟೋರೆಂಟ್ ವಿನ್ಯಾಸ – ಪ್ರಾದೇಶಿಕ, ವರ್ಷದ ವಿಮಾನ ನಿಲ್ದಾಣದ ಲೌಂಜ್ ಉದ್ಘಾಟನೆ – ಪ್ರಾದೇಶಿಕ, ವರ್ಷದ ವಿಮಾನ ನಿಲ್ದಾಣದ ಲೌಂಜ್ ಉದ್ಘಾಟನೆ – ಜಾಗತಿಕ, ವರ್ಷದ ವಿಮಾನ ನಿಲ್ದಾಣದ ಲೌಂಜ್ ಉದ್ಘಾಟನೆ – ಜಾಗತಿಕ, ವರ್ಷದ ವಿಮಾನ ನಿಲ್ದಾಣದ ಕ್ಯಾಶುಯಲ್ ಡೈನಿಂಗ್ ರೆಸ್ಟೋರೆಂಟ್ (20 ದಶಲಕ್ಷ ಪ್ರಯಾಣಿಕರ ಒಳಗಿನ ವಿಮಾನ ನಿಲ್ದಾಣ) – ಪ್ರಾದೇಶಿಕ, ವಿಮಾನ ನಿಲ್ದಾಣದ ಎಫ್&ಬಿ ವರ್ಷದ ಕೊಡುಗೆ – ಸೆನ್ಸ್ ಆಫ್ ಪ್ಲೇಸ್ – ಪ್ರಾದೇಶಿಕ ಹಾಗೂ ವಿಮಾನ ನಿಲ್ದಾಣದ ಎಫ್&ಬಿ ವರ್ಷದ ಕೊಡುಗೆ – ಸೆನ್ಸ್ ಆಫ್ ಪ್ಲೇಸ್- ಜಾಗತಿಕ

Related Posts

Leave a Reply

Your email address will not be published. Required fields are marked *