Menu

ಅಪಘಾತಕ್ಕೆ ಮಗ ಬಲಿ: ಸುದ್ದಿ ತಿಳಿದ ತಾಯಿ ಹೃದಯಾಘಾತದಿಂದ ಸಾವು

ಬೀದರ್ ತಾಲೂಕಿನ ಘೋಡಂಪಳ್ಳಿ ಗ್ರಾಮದಲ್ಲಿ ಅಪಘಾತದಲ್ಲಿ ಮಗ ಮೃತಪಟ್ಟ ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲಕ್ಷ್ಮಿಕಾಂತ್ ಜೋಶಿ ಅಲಿಯಾಸ್​​ ಕಾಂತರಾಜು (45) ಮತ್ತು ತಾಯಿ ಶಾರದಾಬಾಯಿ (86) ಮೃತಪಟ್ಟವರು.

ಬೀದರ್‌ನಿಂದ ಚಿಟ್ಟಾ ಮಾರ್ಗವಾಗಿ ಘೋಡಂಪಳ್ಳಿಗೆ ಹೋಗುವ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪ್ರಯಾಣಿಕರ ‌ಸಮೇತ ಗೂಡ್ಸ್ ವಾಹನ ಬಾವಿಗೆ ಬಿದ್ದು 7 ಜನರಲ್ಲಿ ಇಬ್ಬರು ಮೃತಪಟ್ಟಿದ್ದು, 5 ಜನ ಗಾಯಗೊಂಡಿದ್ದಾರೆ.

ಅತಿವೇಗದ ಕಾರಣ ವಾಹನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಬಾವಿಗೆ ಬಿದ್ದಿದೆ. ಚಾಲಕ ಲಕ್ಷ್ಮಿಕಾಂತ್ ಅಲಿಯಾಸ್ ಕಾಂತುರಾಜ್(45), ರವಿ (18) ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮಗ ಲಕ್ಷ್ಮಿಕಾಂತ್ ಜೋಶಿ ಸಾವಿನ ಸುದ್ದಿ ತಿಳಿದು ತಾಯಿ ಹೃದಯಾಘಾತದಿಂದ ಅಸು ನೀಗಿದ್ದಾರೆ.

Related Posts

Leave a Reply

Your email address will not be published. Required fields are marked *