ಬೆಂಗಳೂರು: ಯಶ್ ನಟಿಸಿ ನಿರ್ಮಾಪಕರೂ ಆಗಿರುವ ರಾಮಾಯಣ ಚಿತ್ರದ ಟೈಟಲ್ ಗ್ಲಿಪ್ಸ್ ಬಿಡುಗಡೆ ಆಗಿದ್ದು, ಚಿತ್ರದ ಗ್ರಾಫಿಕ್ಸ್ ಎಫೆಕ್ಟ್ ಬಗ್ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.
ರಾಮನಾಗಿ ರಣಭೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೊಲ್ ಹಾಗೂ ರಾವಣನಾಗಿ ಯಶ್ ನಟಿಸುತ್ತಿರುವ ಈ ಚಿತ್ರ 835 ಕೋಟಿ ರೂ. ಬೃಹತ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ನಮಿತ್ ಮಲ್ಹೋತ್ರಾ ಮತ್ತು ಯಶ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಚಿತ್ರ ಇದಾಗಿದೆ.
ಭಾರತದ 9 ನಗರಗಳ ಥಿಯೇಟರ್ ಗಳಲ್ಲಿ ಅಮೆರಿಕದ ಸ್ಕಾರ್ ನಲ್ಲೂ ರಾಮಾಯಣದ ಗ್ಲಿಪ್ಸ್ ಬಿಡುಗಡೆ ಆಗಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರಾಮಾಯಣವನ್ನು ಹೊಸ ರೂಪದಲಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್ ನೊಂದಿಗೆ ತೆರೆಗೆ ಅಪ್ಪಳಿಸಲಿದ್ದು, ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.