ಕೋಲ್ಕತಾ: ಭಾರತ ತಂಡದ ಮಧ್ಯಮ ವೇಗಿ ಮೊಹಮದ್ ಶಮಿ ಜೀವನಾಂಶವಾಗಿ ಪ್ರತಿ ತಿಂಗಳು 4 ಲಕ್ಷ ರೂ. ಪತ್ನಿ ಹಸೀನಾ ಜಹಾನ್ ಹಾಗೂ ಪುತ್ರಿ ಐರಾಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಕೋಲ್ಕತಾ ಹೈಕೋರ್ಟ್ ಮಂಗಳವಾರ ಈ ಆದೇಶ ಹೊರಡಿಸಿದ್ದು, ಮೊಹಮದ್ ಶಮಿ ನೀಡುವ 4 ಲಕ್ಷ ರೂ. ಜೀವನಾಂಶದಲ್ಲಿ ಪತ್ನಿ ಹಸೀನಾ ಜಹಾನ್ ಗೆ ಮಾಸಿಕ 1.50 ಲಕ್ಷ ರೂ. ಹಾಗೂ ಪುತ್ರಿ ಐರಾಗೆ ಮಾಸಿಕ 2.5 ಲಕ್ಷ ರೂ. ಪಾಲು ಹೋಗಲಿದೆ ಎಂದು ತಿಳಿಸಿದೆ.
ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣ ಅಡಿ ನಡೆದ ಪ್ರಕರಣವನ್ನು ಇತ್ಯರ್ಥಗೊಳಿಸಿರುವ ಕೋರ್ಟ್ 6 ತಿಂಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಿದೆ.
ಭಾರತ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ಗಳಲ್ಲಿ ಒಬ್ಬರಾಗಿರುವ ಮೊಹಮದ್ ಶಮಿ ಕಳೆದ ವರ್ಷ ಪುತ್ರಿ ಐರಾಳನ್ನು ಭೇಟಿ ಮಾಡಿದ್ದರು.