Menu

ಪೀಕ್ ಅವರ್ ಗಳಲ್ಲಿ ದುಪ್ಪಟ್ಟು ದರ ವಿಧಿಸಲು ಓಲಾ, ಊಬರ್ ಗೆ ಕೇಂದ್ರ ಒಪ್ಪಿಗೆ

ಮಹಾ ನಗರಗಳಲ್ಲಿ ಆಟೋ, ಓಲಾ. ಊಬರ್‌ನಲ್ಲಿ ಓಡಾಟ ಅನಿವಾರ್ಯವಾಗಿದ್ದು, ಮಳೆಗಾಲ, ಟ್ರಾಫಿಕ್‌ ಜಾಮ್‌ನಂತಹ ಸಂದರ್ಭದಲ್ಲಿ ದುಪ್ಪಟ್ಟು ಹಣ ನೀಡಿ ಪ್ರಯಾಣಿಸಬೇಕಾಗಿದೆ. ಖಾಸಗಿ ಕ್ಯಾಬ್‌ ಸೇವಾ ಕಂಪನಿಗಳ ಈ ಕಾರ್ಯವೈಖರಿಯನ್ನು ಖಂಡಿಸಿ ಗ್ರಾಹಕರು ಆಕ್ರೋಶ ಹೊರಹಾಕುತ್ತಲೇ ಬಂದಿದ್ದಾರೆ. ಈಗ ಕೇಂದ್ರ ಸರ್ಕಾರವೇ ಪೀಕ್‌ ಅವರ್‌ಗಳಲ್ಲಿ ದುಪ್ಪಟ್ಟು ದರ ವಿಧಿಸಲು ಅವಕಾಶ ಮಾಡಿಕೊಟ್ಟಿದೆ.

ಓಲಾ, ಊಬರ್‌ನಂಥ ಅಗ್ರಿಗೇಟರ್‌ ಕಂಪನಿಗಳು ಪೀಕ್‌ ಅವರಗಳಲ್ಲಿ ಮೂಲ ಬೆಲೆಗಿಂತ ದುಪ್ಪಟ್ಟು ದರ ಅಂದರೆ ಸರ್ಜ್ ಚಾರ್ಜ್ ವಿಧಿಸಲು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜುಲೈ 1ರಂದು ಆದೇಶ ಹೊರಡಿಸಿದೆ.

ಮೋಟಾರ್ ವೆಹಿಕಲ್ ಅಗ್ರಿಗೇಟರ್ ಮಾರ್ಗಸೂಚಿಗಳು 2025ರ ಅನ್ವಯ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಈವರೆಗೆ ಕ್ಯಾಬ್‌ ಅಗ್ರಿಗೇಟರ್‌ಗಳು ಪೀಕ್‌ ಅವರ್‌ಗಳಲ್ಲಿ ಸರ್ಜ್‌ ಬೆಲೆ ಮೂಲ ದರಕ್ಕಿಂತ 1.5 ಪಟ್ಟು ಹೆಚ್ಚು ವಿಧಿಸಲಾಗುತ್ತಿತ್ತು. ಹೊಸ ಮಾರ್ಗಸೂಚಿ ಪ್ರಕಾರ 2 ಪಟ್ಟು ಹೆಚ್ಚಿನ ದರ ವಿಧಿಸಬಹುದಾಗಿದೆ. ಮೂರು ತಿಂಗಳ ಒಳಗೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲು ರಾಜ್ಯಗಳಿಗೆ ಸೂಚಿಸಲಾಗಿದೆ.

ನಿರ್ದಿಷ್ಟ ಕಾರಣವಿಲ್ಲದೆ ಸವಾರಿ ರದ್ದುಗೊಳಿಸಿದರೆ 100 ರೂ.ಗೆ 10% ನಂತೆ ದಂಡ ವಿಧಿಸಲು ಅವಕಾಶ ನೀಡಲಾಗಿದೆ. 3 ಕಿಮೀ ಒಳಪಟ್ಟ ಡೆಡ್‌ ಮೈಲೇಜ್‌ಗೆ ಪ್ರಯಾಣಿಕರಿಗೆ ಶುಲ್ಕ ವಿಧಿಸಬಾರದು. ಅಗ್ರಿಗೇಟರ್ ಪ್ರಯಾಣಿಕರಿಗೆ ಕನಿಷ್ಠ 5 ಲಕ್ಷ ರೂ. ವಿಮೆ ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರ ಹೇಳಿದೆ.

Related Posts

Leave a Reply

Your email address will not be published. Required fields are marked *