Menu

ಚಿಕ್ಕಮಗಳೂರಿನಲ್ಲಿ ಡ್ರಗ್ಸ್‌ ಪತ್ತೆಗೆ ರುದ್ರ ನಿಯೋಜನೆ

ಮಾದಕ ದ್ರವ್ಯ ಪತ್ತೆ ಕಾರ್ಯಕ್ಕಾಗಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಶ್ವಾನ ದಳಕ್ಕೆ ಹೊಸ ಸದಸ್ಯ ಸೇರ್ಪಡೆಯಾಗಿದೆ. ವಿಶೇಷ ತರಬೇತಿ ಪಡೆದ ‘ರುದ್ರ’ ಹೆಸರಿನ ಶ್ವಾನ ಅಧಿಕೃತವಾಗಿ ಜಿಲ್ಲೆಯ ಪೊಲೀಸ್ ಕರ್ತವ್ಯದ ಭಾಗವಾಗಿದೆ.

21 ಆಗಸ್ಟ್ 2024ರಂದು ಜನಿಸಿದ ರುದ್ರ ಶ್ವಾನವು ಬೆಂಗಳೂರಿನ ಆಡುಗೋಡಿಯ ಕರ್ನಾಟಕ ರಾಜ್ಯ ಪೊಲೀಸ್ ಶ್ವಾನ ದಳ ತರಬೇತಿ ಶಾಲೆಯಲ್ಲಿ ಮಾದಕ ವಸ್ತುಗಳ ಕೃಷಿ, ಶೇಖರಣೆ ಹಾಗೂ ಸಾಗಣೆ ಪತ್ತೆಗೆ ಸಂಬಂಧಿಸಿದಂತೆ ಆರು ತಿಂಗಳು ನಾರ್ಕೋಟಿಕ್ ತರಬೇತಿ ಪಡೆದಿದೆ.

ತರಬೇತಿ ಪೂರ್ಣಗೊಂಡ ನಂತರ ಜೂನ್ 24, 2025ರಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಶ್ವಾನದಳಕ್ಕೆ ಸೇರ್ಪಡೆಗೊಂಡಿದೆ. ರುದ್ರನ ಹ್ಯಾಂಡ್ಲರ್ ಆಗಿ ಶರತ್ ಕುಮಾರ್ ಮತ್ತು ಸಿದ್ದೇಶ್ ಕಾರ್ಯನಿರ್ವಹಿಸುತ್ತಿದ್ದು, ಇವರು ಶ್ವಾನದೊಂದಿಗೆ ಶೋಧಕಾರ್ಯ ಹಾಗೂ ಜಾಗೃತಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ಕೇವಲ ಡ್ರಗ್ಸ್‌ ಪತ್ತೆ ಕಾರ್ಯಕ್ಕೆ ಮಾತ್ರ ಸೀಮಿತವಾಗದೆ ಜಾಗೃತಿ ಕಾರ್ಯಕ್ಕೂ ರುದ್ರನನ್ನು ಬಳಸಿಕೊಂಡು ಅಣಕು ಪ್ರದರ್ಶನ ನಡೆಸಿ, ಡ್ರಗ್ಸ್‌ನ ಅಪಾಯಗಳನ್ನು ಮನವರಿಕೆ ಮಾಡಿಕೊಡಲಾಗುತ್ತಿದೆ.

Related Posts

Leave a Reply

Your email address will not be published. Required fields are marked *