Menu

ಹೃದಯಾಘಾತಕ್ಕೂ ಕೋವಿಡ್‌ ಲಸಿಕೆಗೂ ಸಂಬಂಧವಿಲ್ಲ ಎಂದ ಕೇಂದ್ರ

ಕೋವಿಡ್ ಲಸಿಕೆಗೂ ಮತ್ತು ಹೃದಯಾಘಾತದಿಂದ ಸಾವು ಸಂಭವಿಸುತ್ತಿರುವುದಕ್ಕೂ ಸಂಬಂಧವಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರವು ಸ್ಪಷ್ಟಪಡಿಸಿದೆ.

ಹಾಸನ, ಮೈಸೂರು, ಶಿವಮೊಗ್ಗ, ಬೆಂಗಳೂರು ಸೇರಿದಂತೆ ದೇಶಾದ್ಯಂತ ಯುವಜನರಲ್ಲಿ ಹಠಾತ್ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿವೆ. ಇದರ ಹಿಂದಿನ ಕಾರಣವನ್ನು ತಿಳಿಯುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧ್ಯಯನ ನಡೆಸಿದೆ.
ಅಧ್ಯಯನದಲ್ಲಿ ಯುವಜನರ ಹಠಾತ್ ಸಾವುಗಳು ಮತ್ತು ಕೋವಿಡ್ ಲಸಿಕೆಯ ನಡುವಿನ ಸಂಬಂಧವನ್ನು ಪರಿಶೀಲಿಸಿದ್ದು, ಕೋವಿಡ್ ಲಸಿಕೆ ಮತ್ತು ಯುವಜನ ರಲ್ಲಿನ ಹೃದಯಾಘಾತದ ನಡುವೆ ಯಾವುದೇ ಸಂಬಂಧವಿಲ್ಲ ಎಂದು ದೃಢಪಟ್ಟಿದೆ.

ಕೇಂದ್ರ ಸರ್ಕಾರವು ಕರ್ನಾಟಕ ಸೇರಿದಂತೆ ಎಲ್ಲ ರಾಜ್ಯಗಳಿಗೂ ಕೇಂದ್ರ ಆರೋಗ್ಯ ಸಚಿವಾಲಯದ ಮೂಲಕ ಯುವಜನರಲ್ಲಿನ ಹಾರ್ಟ್ ಅಟ್ಯಾಕ್‌ಗಳಿಗೆ ಕೋವಿಡ್ ಲಸಿಕೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದೆ.

19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 47 ಆಸ್ಪತ್ರೆಗಳಲ್ಲಿ ಮೇ ನಿಂದ ಆಗಸ್ಟ್ 2023ರ ನಡುವೆ ಅಧ್ಯಯನ ನಡೆದಿದೆ. ಹೃದಯಾಘಾತದಿಂದ ಹಠಾತ್‌ ಸಾವುಗಳ ಬಗ್ಗೆ ತಿಳಿಯಲು ಈ ಎರಡು ಸಂಸ್ಥೆಗಳು ನಿರಂತರವಾಗಿ ಕೆಲಸ ಮಾಡುತ್ತಿವೆ. ಕೆಟ್ಟ ಜೀವನಶೈಲಿಯೇ ಜನರಲ್ಲಿ ಇದಕ್ಕೆ ಕಾರಣ ಎನ್ನ      ಲಾಗುತ್ತಿದೆ.

Related Posts

Leave a Reply

Your email address will not be published. Required fields are marked *