Menu

ಅಪ್ರಾಪ್ತ ವಯಸ್ಕನಿಗೆ ಬೈಕ್: ತಂದೆಗೆ ದಂಡ ವಿಧಿಸಿದ ಕೋರ್ಟ್‌

ಅಪ್ರಾಪ್ತ ವಯಸ್ಕ ಮಗನಿಗೆ ಬೈಕ್ ಕೊಟ್ಟ ತಂದೆಗೆ ಒಂದು ದಿನ ಜೈಲು ಶಿಕ್ಷೆ ಮತ್ತು 30 ಸಾವಿರ ದಂಡ ವಿಧಿಸಿ ತುಮಕೂರು ಜಿಲ್ಲೆಯ ಗುಬ್ಬಿ ಜೆಎಂಎಫ್ ಸಿ ನ್ಯಾಯಾಲಯ ಆದೇಶ ನೀಡಿದೆ.

ಪುತ್ರನಿಗೆ ಬೈಕ್ ಕೊಟ್ಟು ಅಪಘಾತಕ್ಕೆ ಕಾರಣವಾಗಿದ್ದಕ್ಕೆ ತಂದೆಯನ್ನು ಆರು ತಿಂಗಳು ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ನೀಡಿದೆ, ನ್ಯಾಯಾಧೀಶೆ ಡಿ.ಅನುಪಮ ಅವರು, ಕೋರ್ಟ್ ಹಾಲ್ ನಲ್ಲಿರುವ ಸೆಲ್‌ನಲ್ಲೇ ಒಂದು ದಿನದ ಜೈಲು ವಾಸ ಮತ್ತು ದಂಡ ವಿಧಿಸಿದ್ದಾರೆ.

ಮಂಗಳವಾರ ಬೆಳಗ್ಗೆಯಿಂದ ಸಂಜೆಯವರೆಗೆ ಜೈಲು ವಾಸ ಅನುಭಿವಿಸಿದ ವ್ಯಕ್ತಿ, ಸಂಜೆ ಆರು ಗಂಟೆ ಬಳಿಕ ರಿಲೀಸ್ ಆಗಿದ್ದಾರೆ. ಇತ್ತೀಚೆಗೆ ಪೋಷಕರು ಅಪ್ರಾಪ್ತ ವಯಸ್ಕ ಮಕ್ಕಳಿಗೆ ವಾಹನಗಳನ್ನು ನೀಡುವ ಪ್ರಕರಣಗಳು ಹೆಚ್ಚುತ್ತಿರುವುದನ್ನು ಪರಿಗಣಿಸಿದ ನ್ಯಾಯಾಲಯ ಈ ಮೂಲಕ ಎಚ್ಚರಿಕೆ ನೀಡಿದಂತಾಗಿದೆ.

 

Related Posts

Leave a Reply

Your email address will not be published. Required fields are marked *