ಬೆಂಗಳೂರಿನ ಕೋರಮಂಗಲದಲ್ಲಿ ಹಣಕಾಸು ವಿಚಾರಕ್ಕೆ ಸಂಬಂಧಿಸಿದ ಮನಸ್ತಾಪ ತೀವ್ರಗೊಂಡು ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿದ ಗ್ಯಾಂಗ್ ಮರ್ಮಾಂಗಕ್ಕೆ ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದಿದೆ.
ಗ್ಯಾಂಗ್‌ನಲ್ಲಿದ್ದವರು ಇಂಜೆಕ್ಷನ್ ಚುಚ್ಚಿ ವ್ಯಕ್ತಿಗೆ ಚಿತ್ರಹಿಂಸೆ ನೀಡಿದ್ದು, ಆತ ಕಾರಿನಲ್ಲಿ ಜೋರಾಗಿ ಕೂಗಿದ ಹಿನ್ನಲೆ ಬಚಾವಾಗಿದ್ದಾನೆ. ಸಗಾಯ್ ರಾಜ್ ಎಂಬಾತನಿಗೆ ವಿಕೃತ ಚಿತ್ರಹಿಂಸೆ ನೀಡಿದ ಆರೋಪಿಗಳು.
ಈ ಹಿಂದೆ ಆನಂದ್ ಕುಮಾರ್ ಎಂಬಾತನಿಗೆ ಸಗಾಯ್ ರಾಜ್ ಹಣ ನೀಡಿದ್ದ, ತಂದೆಗೆ ಕಿಡ್ನಿ ಫೇಲ್ಯೂರ್ ಎಂದು ಹೇಳಿ ಆನಂದ್ ಕುಮಾರ್ ಹಣ ಪಡೆದಿದ್ದನಂತೆ. ಆನಂದ್ ಕುಮಾರ್ ಮಗಳು ಐಶ್ವರ್ಯ ಅಕೌಂಟ್ ಗೆ ಹಂತ ಹಂತವಾಗಿ 3 ಲಕ್ಷ ಹಣ ಹಾಕಿಸಿಕೊಂಡ ಆನಂದ್ ಮನೆ ಸೇಲ್ ಮಾಡುವುದಾಗಿ ಹೇಳಿದ್ದ. ಆಗ ಸಗಾಯ್ ರಾಜ್ ಮನೆ ತಾನೇ ಖರೀದಿಸುವೆ ಎಂದಿದ್ದನಂತೆ ಅಗ್ರಿಮೆಂಟ್ ಗೆ ಮುನ್ನ ಒಂದು ಕೋಟಿ ನಂತರ ಉಳಿದ ಅಮೌಂಟ್ ನೀಡುವ ಎಂದು ಮಾತುಕತೆಯಾಗಿತ್ತು .
ಗಾಯ್ ಈಗಾಗಲೇ ಒಂದು ಕೋಟಿ ಆನಂದ್ ಗೆ ನೀಡಿದ್ದನಂತೆ. ಮನೆ ರಿಜಿಸ್ಟಾರ್ ಮಾಡದ ಹಿನ್ನಲೆ ಸಗಾಯ್ ರಾಜ್ ಹಣ ವಾಪಸ್ ಕೇಳಿದ್ದ. ಈ ಕಾರಣಕ್ಕೆ ಸಿಟ್ಟಿಗೆದ್ದು ಆನಂದ ಕುಮಾರ್ ನ ಗ್ಯಾಂಗ್ ಸಗಾಯ್ ರಾಜ್ ಕಾರಿನಲ್ಲಿ ಹೋಗುವಾಗ ಬೈಕ್‌ನಲ್ಲಿ ಅಡ್ಡಗಟ್ಟಿ ಮುಖಕ್ಕೆ ಬಟ್ಟೆ ಕಟ್ಟಿ ಕಿಡ್ಬ್ಯಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆಯ್ದು ಕೈಕಾಲು ಕಟ್ಟಿ ಹಾಕಿ ಮರ್ಮಾಂಗಕ್ಕೆ ಹಾಗೂ ತೊಡೆಗಳಿಗೆ ಸಿಗರೇಟ್ ನಿಂದ ಚುಚ್ಚಿ ಹಿಂಸೆ ನೀಡಿದೆ, ನಂತರ ಅದನ್ನು ವೀಡಿಯೊ ಮಾಡಿ ಬೆದರಿಕೆ ಹಾಕಿದೆ.
ರಾತ್ರಿ ಇಡೀ ಕಾರಿನಲ್ಲಿ ಸುತ್ತಾಡಿಸಿ ಬೆಳಗಿನ ಜಾವ ಟ್ರಾಫಿಕ್ ವೇಳೆ ಕೂಗಾಡಿದ್ದರಿಂದ ಸಾರ್ವಜನಿಕರು ಸಗಾಯ್ ನನ್ನ ಬಚಾವ್ ಮಾಡಿದ್ದರು. ಟ್ರಾಫಿಕ್ ಪೊಲೀಸರ ಮೂಲಕ ಸಗಾಯ್ ರಾಜ್ ಕೋರಮಂಗಲ ಪೊಲೀಸ್‌ಗೆ ದೂರು ನೀಡಿದ್ದಾನೆ. ಐಶ್ವರ್ಯ , ಆಶೀಶ್ , ಆನಂದ್ ಸೇರಿದಂತೆ ಹಲವರ ಮೇಲೆ ಕೇಸ್ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.