ಬೆಂಗಳೂರು ನಗರದಲ್ಲಿ ಸುರಂಗ ಮಾರ್ಗ ಸಿದ್ಧಪಡಿಸಲು ಸರ್ಕಾರ ಮುಂದಾಗಿದೆ. ನಗರದ ಟ್ರಾಫಿಕ್ ಝೋನ್ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ಗೆ ಪರ್ಯಾಯ ಮಾರ್ಗ ಸಿದ್ಧಪಡಿಸಲು ಸರ್ಕಾರದ ಸಿದ್ಧತೆ ನಡೆಸಿದೆ.
18,000 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣ ಮಾಡಲು ಸರ್ಕಾರ ಕ್ರಮ ವಹಿಸಲಿದ್ದು, ಈ ಸುರಂಗ ಮಾರ್ಗದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ಗೆ 45 ನಿಮಿಷ ಸಂಚಾರ ಸಮಯ ಸಾಕಾಗಲಿದೆ.
ಈ ಮಾರ್ಗಗಳ ನಡುವೆ ಈಗಿರುವ ಸಂಚಾರ ಸಮಯಕ್ಕಿಂತ ಅರ್ಧದಷ್ಟು ಕಡಿಮೆಯಾಗಲಿದೆ, 2030ರ ವೇಳೆಗೆ ಹೆಬ್ಬಾಳ ಟು ಸಿಲ್ಕ್ ಬೋರ್ಡ್ ಸುರಂಗ ಮಾರ್ಗ ರೆಡಿ ಆಗಲಿದೆ.
ಈ ರಸ್ತೆಯಲ್ಲಿ ಸಂಚಾರ ಮಾಡಲು ಪ್ರತಿ ಕಿಮೀ ಗೆ 19ರೂ ಪಾವತಿ ಕಡ್ಡಾಯ ವಿರುತ್ತದೆ, ಒಂದು ಬಾರಿ ಸಂಚರಿಸಲು ತಗಲುವ ವೆಚ್ಚ 319ರೂ ಆಗಲಿದೆ. ಈ ಸುರಂಗ ರಸ್ತೆಯ ಎರಡು ಬದಿಯ ಉದ್ದ 33.49ಕಿಮೀ ಇರುವುದು.