Menu

ಮಂಗಳೂರಿನ ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನ ಎಗರಿಸಿದ ಕ್ಯಾಷಿಯರ್‌

ಮಂಗಳೂರಿನ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಗ್ರಾಹಕರು ಅಡವಿಟ್ಟ ಚಿನ್ನವನ್ನು ಕ್ಯಾಷಿಯರ್ ಎಗರಿಸಿ ಬೇರೊಂದು ಬ್ಯಾಂಕ್‌ನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದು ಮಜಾ ಮಾಡಿ ಸಿಕ್ಕಿಬಿದ್ದಿದ್ದಾನೆ.

ಶಕ್ತಿನಗರದ ಪದುವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಕ್ಯಾಷಿಯರ್ ಪ್ರೀತೇಶ್ ಗ್ರಾಹಕರು ಸಾಲಕ್ಕಾಗಿ ಚಿನ್ನ ಅಡವಿಟ್ಟಾಗ ಅದರ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ. ಎರಡು ಸಾವಿರಕ್ಕೂ ಅಧಿಕ ಗ್ರಾಹಕರು ಇರುವ ಬ್ಯಾಂಕ್‌ನ ಇಪ್ಪತ್ತಾರು ಗ್ರಾಹಕರ ಚಿನ್ನವನ್ನು ಪ್ರೀತೇಶ್ ಎಗರಿಸಿದ್ದಾನೆ. ಬ್ಯಾಂಕ್‌ನ ದಾಖಲೆಗಳಲ್ಲಿ ಚಿನ್ನಕ್ಕಾಗಿ ಮಾಡಿದ ಲೋನ್‌ ಗಳು ಕ್ಲಿಯರ್ ಆಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿ ಲಾಕರ್‌ನ ಚಿನ್ನ ದೋಚಿದ್ದಾನೆ. 5.80 ಕೋಟಿ ಮೌಲ್ಯದ ಆರೂ ವರೆ ಕೆ.ಜಿ ಚಿನ್ನ ಎಗರಿಸಿದ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ದುಬೈಗೆ ಹೋಗಿದ್ದಾನೆ.

ಬ್ಯಾಂಕ್‌ನ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡುತ್ತಿದ್ದಂತೆಯೇ ಪ್ರೀತೇಶ್ ಬಂದು ನ್ಯಾಯಾಲಯಕ್ಕೆ ಹಾಜರಾ ಗಿದ್ದಾನೆ. ಕದ್ದ ಚಿನ್ನದಲ್ಲಿ ಎರಡು ಕೆ.ಜಿ ಮುನ್ನೂರು ಗ್ರಾಂ ಬಂಗಾರವನ್ನು ಮತ್ತೊಂದು ಸಹಕಾರ ಬ್ಯಾಂಕ್‌ನಲ್ಲಿ ಅಡವಿಟ್ಟು ಎರಡೂವರೆ ಕೋಟಿ ರೂಪಾಯಿ ಸಾಲ ಪಡೆದುಕೊಂಡಿದ್ದ.

26 ಮಂದಿ ಗ್ರಾಹಕರ ಚಿನ್ನವನ್ನು ಪ್ರೀತೇಶ್ ಎಗರಿಸಿದ್ದು, ಹತ್ತು ಮಂದಿ ಬ್ಯಾಂಕ್‌ಗೆ ಬಂದು ತಮ್ಮ ಚಿನ್ನ ಎಂದು ಖಚಿತ ಪಡಿಸಿಕೊಂಡಿದ್ದಾರೆ. ಶೇಖ್ ಮಹಮ್ಮದ್ ಎಂಬಾತನ ನೆರವಿನೊಂದಿಗೆ ಪ್ರೀತೇಶ್‌ ಕೃತ್ಯ ಎಸಗಿದ್ದ, ಸಿಕ್ಕಿಬಿದ್ದಾಗ ಗ್ರಾಹಕರಿಗೆ ಕೊಡಲು ಎಲ್ಲಾ ಚಿನ್ನಾಭರಣವನ್ನು ನಕಲಿಯಾಗಿ ತಯಾರಿಸಿಟ್ಟಿದ್ದರು. ಪೊಲೀಸರು ಮಹಮ್ಮದ್‌ನನ್ನೂ ವಶಕ್ಕೆ ಪಡೆದುಕೊಂಡು ನಾಲ್ಕೂವರೆ ಕೆ.ಜಿ ನಕಲಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

Related Posts

Leave a Reply

Your email address will not be published. Required fields are marked *